ADVERTISEMENT

ಮಂತ್ರಾಲಯ: ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ರಾಯಚೂರು: ಮಂತ್ರಾಲಯ ರಾಘ ವೇಂದ್ರಸ್ವಾಮಿ ಮಠಕ್ಕೆ ಸಂಬಂ ಧಪಟ್ಟ ಸಮಿತಿಗಳ ಎಲ್ಲ ಆಡಳಿತವನ್ನು ಮಠದ ಪೀಠಾಧಿಪತಿ ಸುಯತೀಂದ್ರ ತೀರ್ಥ ಸ್ವಾಮೀಜಿ ತಮ್ಮ ಉತ್ತರಾ ಧಿಕಾರಿ ಸುಬುಧೇಂದ್ರತೀರ್ಥ ಸ್ವಾಮೀ ಜಿಗೆ ಸೋಮವಾರ ಹಸ್ತಾಂತರಿಸಿದರು.

ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ರಾಘ ವೇಂದ್ರ ಸ್ವಾಮೀಜಿ ಮಠಕ್ಕೆ ಸೇರಿದ ಸಮಸ್ತ ಶಾಖಾ ಮಠಗಳು, ಕಲ್ಯಾಣ ಮಂಟಪಗಳು, ವಿದ್ಯಾಪೀ ಠಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಶ್ರೀಮಠಕ್ಕೆ ಸಂಬಂ ಧಪಟ್ಟ ಸಮಿತಿಗಳ ಎಲ್ಲ ಆಡಳಿತ ವ್ಯವಸ್ಥೆಯನ್ನೂ ಪೀಠಾಧಿ ಪತಿಗಳು ಉತ್ತ ರಾಧಿಕಾರಿ ಸುಬುಧೇಂ ದ್ರತೀರ್ಥ ಸ್ವಾಮೀಜಿಗೆ ವಹಿಸಿ ಕೊಟ್ಟಿದ್ದಾರೆ ಎಂದು ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾ ಚಾರ್ ತಿಳಿಸಿದ್ದಾರೆ.

ಪೀಠಾಧಿಪತಿ ಜಪತಪಾನುಷ್ಠಾನ ಮತ್ತು ಮನ್ಮೂಲ ರಾಮನ ಏಕಾಂತ ಸೇವೆಯಲ್ಲಿರಲು ಬಯಸಿದ್ದು, ಈ ಕಾರಣದಿಂದ ಉತ್ತರಾಧಿಕಾರಿ ಸುಬುಧೇಂದ್ರ ತೀರ್ಥ ರಿಗೆ ಶ್ರೀಮಠದ ಆಡಳಿತ ವ್ಯವಸ್ಥೆ ವಹಿಸಿಕೊಟ್ಟಿದ್ದಾರೆ. 

ಇದೇ ಪ್ರಥಮ: ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ 700 ವರ್ಷದ ಪರಂಪರೆಯಲ್ಲಿ ಇದೇ ಪ್ರಥಮ ಬಾರಿಗೆ ಶ್ರೀಮಠದ ಪೀಠಾಧಿ ಪತಿ ತಮ್ಮ ಉತ್ತರಾಧಿಕಾರಿಗೆ ಮಠದ ಆಡಳಿತವನ್ನು ವಹಿಸಿಕೊಟ್ಟವರಾಗಿದ್ದಾರೆ. ಈವರೆಗಿನ ಪೀಠಾಧಿಪತಿ ಬೃಂದಾವನಸ್ಥರಾದ ಬಳಿಕ ಉತ್ತರಾಧಿಕಾರಿ ಸ್ವಾಮೀಜಿ ಶ್ರೀಮಠದ ಆಡಳಿತವನ್ನು ವಹಿಸಿಕೊಳ್ಳುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.