ADVERTISEMENT

ಮಲ್ಲಕಂಬದ ರೋಚಕತೆಯಲ್ಲಿ ಮನಸೋತ ಜನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST

ಮೈಸೂರು: ಭಾನುವಾರ ಬನ್ನಿಮಂಟಪದಲ್ಲಿ  ಹತ್ತು ಅಡಿ ಎತ್ತರದ ಜಾರುವ ಮಲ್ಲಕಂಬದ ಮೇಲೆ ನಿಂತ ಯೋಧ ತನ್ನ ಬಾಯಿಂದ ಬೆಂಕಿ ಉಗುಳುತ್ತಿದ್ದರೆ ಕಿಕ್ಕಿರಿದು ಸೇರಿದ್ದ ಜನರು ರೋಚಕತೆಯ ಅಲೆಗಳಲ್ಲಿ ಕೊಚ್ಚಿಹೋದರು! `ನಿಮ್ಮ ಸೇನೆ ತಿಳಿಯಿರಿ' ಕಾರ್ಯಕ್ರಮದ ಅಂಗವಾಗಿ ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ಯೋಧರು ಪ್ರದರ್ಶಿಸಿದ ಮಲ್ಲಕಂಬದ ಕೌಶಲಗಳು ಜನರ ಮನಸೂರೆಗೊಂಡವು.

  ಮಹಾರಾಷ್ಟ್ರದ ಪ್ರಮುಖ ಜಾನಪದ ಕ್ರೀಡೆಯಾಗಿರುವ ಮಲ್ಲಕಂಬದ ಕಠಿಣ ಕೌಶಲಗಳನ್ನು ಸೈನಿಕರು ಪ್ರದರ್ಶಿಸಿದರು. ಇದು ನೋಡಲು ರೋಮಾಂಚಕವಾದರೂ ಮಾಡಲು ಮಾತ್ರ ಅಷ್ಟೇ ಅಪಾಯಕಾರಿ. ಮೈದಾನದ ನಟ್ಟ ನಡುವೆ ನೆಟ್ಟ 2 ಮಲ್ಲಕಂಬಗಳ ಮೇಲೆ ಸಿಪಾಯಿ ಪ್ರಶಾಂತ್ ಮತ್ತು ತಂಡವು ಮೊದಲಿಗೆ ಪ್ರೇಕ್ಷಕ ಗಣಕ್ಕೆ  ವಂದನೆ ಸಲ್ಲಿಸಿತು. ನಂತರ ಪಿರಮಿಡ್, ಕಮಲ ಹೂ ಮಾದರಿ, ಏಣಿಯಂತಹ ಮಾದರಿಗಳ ಆಸನಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT