ADVERTISEMENT

ಮಳೆ ಇಳಿಮುಖ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಶಿವಮೊಗ್ಗ: ಜ್ಲ್ಲಿಲೆಯಾದ್ಯಂತ ಮಳೆ ತಗ್ಗಿದೆ. ಜಲಾಶಯಗಳ ಒಳಹರಿವು ಕಡಿಮೆ ಆಗಿದೆ. ಕಳೆದ 24 ಗಂಟೆಗಳಲ್ಲಿನ ಮಳೆಗೆ ಲಿಂಗನಮಕ್ಕಿ, ತುಂಗಾ ಅಣೆಕಟ್ಟೆಯ ನೀರಿನಮಟ್ಟ ತಲಾ ಒಂದು ಅಡಿ ಏರಿದೆ.

ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ 1,794.50 (ಗರಿಷ್ಠ 1819) ಅಡಿ ಇದೆ. ಒಳಹರಿವು 29,616 ಕ್ಯೂಸೆಕ್‌ಗೆ ಕುಸಿದಿದೆ. ಹೊರಹರಿವನ್ನು ಸಂಪೂರ್ಣ ನಿಲ್ಲಿಸಲಾಗಿದೆ.  ಹಾಗೆಯೇ, ಭದ್ರಾ ಜಲಾಶಯದ ನೀರಿನಮಟ್ಟ 164.7 (ಗರಿಷ್ಠ 186) ಅಡಿ ಇದೆ.  ಒಳಹರಿವು 16,883 ಕ್ಯೂಸೆಕ್‌ಗೆ ಇಳಿದಿದೆ. ಹೊರಹರಿವು 2,996 ಕ್ಯೂಸೆಕ್ ಇದೆ.


ತುಂಗಾ ಜಲಾಶಯದ ಒಳಹರಿವಿನಲ್ಲಿ ದಿಢೀರ್ ಇಳಿದಿದ್ದು, ಸೋಮವಾರ 18,271 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಜಲಾಶಯದ ನೀರಿನಮಟ್ಟ 587.42 (ಗರಿಷ್ಠ 588) ಮೀ. ಇದ್ದು, 12 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ಬೆಳಗಾವಿ ವರದಿ: ಕೃಷ್ಣಾ ಹಾಗೂ ಉಪ ನದಿಗಳಾದ ದೂಧಗಂಗಾ, ವೇದಗಂಗಾ ನದಿಗಳಲ್ಲಿನ ಪ್ರವಾಹ ಸೋಮವಾರ ಕಡಿಮೆಯಾಗಿದೆ. ಮುಳುಗಿದ್ದ ಆರು ಕೆಳಮಟ್ಟದ ಸೇತುವೆಗಳ ಪೈಕಿ ನಾಲ್ಕು ಸಂಚಾರಕ್ಕೆ ಮುಕ್ತವಾಗಿವೆ. ಮಹಾರಾಷ್ಟ್ರದ ಕೊಂಕಣ ದಲ್ಲಿ ಮಳೆ ಕಡಿಮೆಯಾಗಿದೆ.


ಕ್ಷೀಣಿಸಿದ ಮಳೆ: ಉತ್ತರ ಕರ್ನಾಟಕದ ಬಹುತೇಕ ಕಡೆಗೆ ಸೋಮವಾರ ಮಳೆ ಕ್ಷೀಣಿಸಿದ್ದು, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.