ADVERTISEMENT

ಮೇ24ಕ್ಕೆ ಪ್ರಥಮ ಪಿಯು ತರಗತಿ?

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಬೆಂಗಳೂರು: ದಾಖಲಾತಿ ಪ್ರಕ್ರಿಯೆಗೆ ಸಮಯಾವಕಾಶ ಅಗತ್ಯವಿರುವುದರಿಂದ ಪ್ರಥಮ ಪಿಯುಸಿ ತರಗತಿಗಳನ್ನು ಮೇ 24ರಿಂದ ಪ್ರಾರಂಭಿಸಲು ಅನುಮತಿ ಕೋರಿ ‍ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

‘ಎಸ್‌ಎಸ್‌ಎಲ್‌ಸಿ ಫಲಿತಾಂಶವೂ ತಡವಾಗಿ ಪ್ರಕಟವಾಗಿದೆ ಹಾಗೂ ಐಸಿಎಸ್‌ಇ ಫಲಿತಾಂಶ ಮೇ 14ಕ್ಕೆ ಪ್ರಕಟವಾಗುವುದರಿಂದ ದಾಖಲಾತಿಗೆ ಕನಿಷ್ಠ ಎರಡು ವಾರವಾದರೂ ಸಮಯ ಬೇಕಿದೆ ಎಂದು ವಿವಿಧ ಕಾಲೇಜಿನ ಪ್ರಾಂಶುಪಾಲರು ಕೋರಿದ್ದಾರೆ. ಅದರನ್ವಯ ಇಲಾಖೆ, ತರಗತಿ ಆರಂಭ ಮುಂದೂಡಲು ಪ್ರಸ್ತಾವ ಸಲ್ಲಿಸಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT