ಮೈಸೂರು: ಮೈಸೂರು ನ್ಯಾಯಾಲಯದ ಆವರಣದಲ್ಲಿ ಸ್ಪೋಟಕ ವಸ್ತು ಪತ್ತೆಯಾಗಿದೆ. ಸೋಮವಾರ ಸಂಜೆ 4.10ಕ್ಕೆ ನ್ಯಾಯಾಲಯದ ಶೌಚಾಲಯದಲ್ಲಿ ಭಾರೀ ಶಬ್ದದೊಂದಿಗೆ ಸ್ಫೋಟ ಸಂಭವಿಸಿದ್ದು, ಶೌಚಾಲಯದ ಕಿಟಕಿ ಗಾಜು ಪುಡಿ ಪುಡಿಯಾಗಿದೆ.
ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಆಗಮಿಸಿ ತಪಾಸಣೆ ನಡೆಸಿದೆ, ಅದೇ ವೇಳೆ ಶೌಚಾಲಯದಲ್ಲಿ ಅನುಮಾನಸ್ಪದ ಸ್ಥಿತಿಯಲ್ಲಿ ಎರಡು ಪೊಟ್ಟಣಗಳು ಪತ್ತೆಯಾಗಿವೆ. ಈ ಪೊಟ್ಟಣಗಳಲ್ಲಿ ಗನ್ ಪೌಡರ್ ಪತ್ತೆಯಾಗಿದೆ ಎಂದು ಬಾಂಬ್ ನಿಷ್ಕ್ರಿಯ ದಳ ಹೇಳಿದೆ.
ಬಾಂಬ್ ಮಾದರಿಯಲ್ಲಿಯೇ ಭಾರೀ ಹೊಗೆಯಿಂದ ಸ್ಫೋಟ ಸಂಭವಿಸಿದ್ದು, ಯಾರಿಗೂ ಪ್ರಾಣ ಹಾನಿ ಸಂಭವಿಸಿಲ್ಲ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.