ADVERTISEMENT

ಮೈಸೂರು: ಬಂದೂಕು ಮಾರಾಟ ಜಾಲ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST

ಮೈಸೂರು: ಬಂದೂಕು ಖರೀದಿಸಿ ರಾಜಕಾರಣಿಗಳನ್ನು ಬೆದರಿಸಲು ಮುಂದಾಗಿದ್ದ ನಾಲ್ವರನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಬಂದೂಕು ಹಾಗೂ 12 ಗುಂಡು ವಶಪಡಿಸಿಕೊಳ್ಳಲಾಗಿದೆ.

ನಂಜನಗೂಡಿನವರಾದ ಬಿಜೆಪಿ ಕಾರ್ಯಕರ್ತ, ರೌಡಿ ಶೀಟರ್ ಧನರಾಜ್‌ ಬೋಲಾ, ಶಾಹಿನ್ಯಾ ಮತ್ತು ಸಾಧಿಕ್‌ ಪಾಷ ಎಂಬುವರು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ ಕೈದಿ ಅಫ್ಸರ್‌ ಖಾನ್‌ನನ್ನು ಭೇಟಿಯಾಗಿದ್ದಾರೆ. ₹ 60 ಸಾವಿರ ಹಣ ಪಾವತಿಸಿ ಬಂದೂಕು ಮಾರುವವರ ಮೊಬೈಲ್‌ ಸಂಖ್ಯೆ ಪಡೆದುಕೊಂಡಿದ್ದಾರೆ.

ಖಚಿತ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂದೂಕು ಮಾರಾಟ ಜಾಲದಲ್ಲಿ ಅಫ್ಸರ್ ಖಾನ್‌ ಪಾತ್ರವೂ ಇರುವುದು ಬೆಳಕಿಗೆ ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.