ADVERTISEMENT

ರಂಗನಾಥ ದೇಗುಲ: ಅರ್ಚಕ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 19:30 IST
Last Updated 19 ಮೇ 2018, 19:30 IST
ರಂಗನಾಥ ದೇಗುಲ: ಅರ್ಚಕ ರಾಜೀನಾಮೆ
ರಂಗನಾಥ ದೇಗುಲ: ಅರ್ಚಕ ರಾಜೀನಾಮೆ   

ಶ್ರೀರಂಗಪಟ್ಟಣ: ಇಲ್ಲಿನ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಧನಲಕ್ಷ್ಮಿ ಅವರು ಕಿರುಕುಳ ನೀಡುತ್ತಿದ್ದು, ಕೆಲಸ ಮಾಡಲಾಗದೆ ಅರ್ಚಕ ವೃತ್ತಿಗೆ ರಾಜೀನಾಮೆ ನೀಡಿದ್ದೇನೆ ಎಂದು ದೇವಾಲಯದ ಸುತ್ತಲಗುಡಿ ಅರ್ಚಕ ಎಸ್‌.ನರಸಿಂಹರಂಗನ್‌ ಹೇಳಿದ್ದಾರೆ.

‘ಮೃತ್ತಿಕಾ ಶೌಚದ ಬಗ್ಗೆ ಏನೂ ತಿಳಿಯದವರಿಗೆ ಪ್ರಧಾನ ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಹಲವು ಶತಮಾನಗಳಿಂದ ಅನೂಚಾನವಾಗಿ ನಡೆದು ಬಂದ ಧಾರ್ಮಿಕ ಸಂಪ್ರದಾಯಗಳನ್ನು ಗಾಳಿಗೆ ತೂರಲಾಗಿದೆ. ಹಲವು ತಿಂಗಳುಗಳಿಂದ ಇಲ್ಲಿ ಬಲಿ ಪ್ರಧಾನ ಪಲ್ಲಕ್ಕಿಯೇ ಇಲ್ಲ. ಧಾರ್ಮಿಕ ವಿಧಿ–ವಿಧಾನಗಳ ಉಲ್ಲಂಘನೆ ಬಗ್ಗೆ ಪ್ರಶ್ನಿಸಿದರೆ ವೇತನದಲ್ಲಿ ಕಡಿತ ಮಾಡಲಾಗುತ್ತಿದೆ. ಹಿರಿಯ ಅರ್ಚಕರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹಲವು ದಶಕಗಳಿಂದ ಸೇವೆ ಸಲ್ಲಿಸಿರುವ ನನಗೆ ಇಲ್ಲಿ ಗೌರವ ಸಿಗದ ಕಾರಣ ಅರ್ಚಕ ವೃತ್ತಿಗೆ ಮೇ 11ರಂದು ರಾಜೀನಾಮೆ ನೀಡಿದ್ದೇನೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಈ ದೇವಾಲಯದಲ್ಲಿ 20 ವರ್ಷಗಳ ಕಾಲ ಪಾರುಪತ್ಯಗಾರನಾಗಿ ಕೆಲಸ ಮಾಡಿದ್ದೇನೆ. ಆ ಸಮಯದಲ್ಲಿ ಕೈಬಿಟ್ಟು ಹೋಗುತ್ತಿದ್ದ ಐತಿಹಾಸಿಕ ದೇವಾಲಯದ ಆಸ್ತಿಯನ್ನು ಉಳಿಸಿದ್ದೇನೆ. ಇಷ್ಟಾದರೂ ನನ್ನ ಹಿರಿತನಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಗೌರವ ಕೊಡುತ್ತಿಲ್ಲ. ವಿನಾಕಾರಣ ಗೈರುಹಾಜರಿ ಹಾಕುವುದು, ಪ್ರಶ್ನಿಸುವುದು ಮಾಡಿ ಮುಜುಗರ ಉಂಟು ಮಾಡಿದ್ದಾರೆ. ಸಾಂಪ್ರದಾಯಿಕ ಪೂಜಾ ವಿಧಾನಗಳು ಗೊತ್ತಿಲ್ಲದವರು ಸ್ವಾಮಿ (ಶ್ರೀರಂಗನಾಥಸ್ವಾಮಿ) ಮತ್ತು ಅಮ್ಮ (ರಂಗನಾಯಕಿ) ಅವರನ್ನು ಮುಟ್ಟಲು ಅವಕಾಶ ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.