ADVERTISEMENT

ರಂಗಭೂಮಿ ಕಲಾವಿದೆ ಲಲಿತಮ್ಮ ನಿಧನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2016, 19:42 IST
Last Updated 20 ಜನವರಿ 2016, 19:42 IST
ರಂಗಭೂಮಿ ಕಲಾವಿದೆ ಲಲಿತಮ್ಮ ನಿಧನ
ರಂಗಭೂಮಿ ಕಲಾವಿದೆ ಲಲಿತಮ್ಮ ನಿಧನ   

ಗದಗ: ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿದ್ದ ಹಿರಿಯ ರಂಗಭೂಮಿ ಕಲಾವಿದೆ ಲಲಿತಮ್ಮ  (ಮುಮ್ತಾಜ್‌ ಬೇಗಂ ಶೇಖ್‌)  ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

80 ವರ್ಷ ವಯಸ್ಸಾಗಿದ್ದ ಇವರಿಗೆ ಪುತ್ರ ಇದ್ದಾನೆ. ಅಂತ್ಯಕ್ರಿಯೆ ರಾತ್ರಿ ರೋಣದಲ್ಲಿ ನಡೆಯಿತು. ಕೊಟ್ಟೂರೇಶ್ವರ ನಾಟ್ಯ ಸಂಘದಲ್ಲಿ ಅಭಿನಯಿಸುವ ಮೂಲಕ ರಂಗಭೂಮಿ ಪ್ರವೇಶ ಮಾಡಿದ ಅವರು ‘ಹೇಮರಡ್ಡಿ ಮಲ್ಲಮ್ಮ’, ‘ಬಸ್‌ ಕಂಡಕ್ಟರ್‌’, ‘ಮುದುಕನ ಮದುವೆ’, ‘ರಕ್ತರಾತ್ರಿ’ ಸೇರಿದಂತೆ 300ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದರು. ಅವರ ಸೇವೆ ಗುರುತಿಸಿ ಸರ್ಕಾರ 2015 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಗದಗ ಪಟ್ಟಣದ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಅವರು ದೊಡ್ಡಮ್ಮನ ಆಶ್ರಯದಲ್ಲಿ ಬೆಳೆದರು. ಅವರ ದೊಡ್ಡಮ್ಮನಿಗೆ ಮಕ್ಕಳಿಲ್ಲದ ಕಾರಣ ಲಲಿತಮ್ಮ ಅವರನ್ನು ದತ್ತು ಪಡೆದಿದ್ದರು. ಅಲ್ಲಿಯೇ ನಾಟಕದ ಗೀಳು ಹಚ್ಚಿಕೊಂಡ ಲಲಿತಮ್ಮ, 18ನೇ ವಯಸ್ಸಿನಲ್ಲಿ ಗದಗಕ್ಕೆ ಬಂದು ಹಿರಿಯ ರಂಗಭೂಮಿ ಕಲಾವಿದೆ ಪ್ಲೊರಿನಾ ಬಾಯಿ ಜತೆ ಒಡನಾಟ ಬೆಳೆಸಿಕೊಂಡು ರಂಗಭೂಮಿಯತ್ತ ಆಕರ್ಷಿತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.