ADVERTISEMENT

ವಾಣಿಜ್ಯ ತೆರಿಗೆ ಉಪ ಆಯುಕ್ತ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಬೆಳಗಾವಿ: ನಗರದ ಹೋಟೆಲ್ ಮಾಲೀಕರೊಬ್ಬರಿಂದ ರೂ 50 ಸಾವಿರ ಲಂಚ ಪಡೆಯುತ್ತಿದ್ದ ಬೆಳಗಾವಿ ವಾಣಿಜ್ಯ ತೆರಿಗೆ (ವಸೂಲಾತಿ) ಉಪ ಆಯುಕ್ತ ಎಸ್.ಎನ್. ಸೋಮನಾಳ ಹಾಗೂ ಇನ್‌ಸ್ಪೆಕ್ಟರ್ ವೈ.ಬಿ. ರಡ್ಡೇರ ಲೋಕಾಯುಕ್ತ ಪೊಲೀಸರ ಬಲೆಗೆ ಬುಧವಾರ ಸಿಕ್ಕಿಬಿದ್ದರು.

ನಿತೇಶ ಕುಮಾರ ಬಾಲಿ ಶಾಹು ಅವರ `ದುರ್ಗಾ ರೆಸಿಡೆನ್ಸಿ~ ಹೋಟೆಲ್ ಮೇಲೆ ಇದೇ 10ರಂದು ದಾಳಿ ನಡೆಸಿದ್ದ ಸೋಮನಾಳ ಹಾಗೂ ರಡ್ಡೇರ, ಕೆಲ ದಾಖಲೆಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು. `ಲಂಚ ನೀಡಬೇಕು ಇಲ್ಲವೇ ಬಹಳ ತೆರಿಗೆ ತುಂಬಬೇಕಾಗುತ್ತದೆ~ ಎಂದು ನಿತೇಶ್ ಕುಮಾರ್ ಅವರಿಗೆ ಸೋಮನಾಳ ಬೆದರಿಕೆ ಹಾಕಿದ್ದರು.  ಈ ಹಿನ್ನೆಲೆಯಲ್ಲಿ ನಿತೇಶ ಕುಮಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಎಸ್ಪಿ ಸಿ.ಎ. ಬೆಳಮಕರ ನೇತೃತ್ವದಲ್ಲಿ ಈ ದಾಳಿ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.