ADVERTISEMENT

ವಿವೇಕಾನಂದರ ಚಿಂತನೆ ಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಗುಲ್ಬರ್ಗ:  ಸ್ವಾಮಿ ವಿವೇಕಾನಂದರ ಚಿಂತನೆ ಇಂದಿನ ಯುವಜನತೆಗೆ ಅತ್ಯವಶ್ಯ ಎಂದು ಗದಗ- ವಿಜಾಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿ ಹೇಳಿದರು.

ಆಶ್ರಮ ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಗರದಲ್ಲಿ ನಡೆಯುತ್ತಿರುವ `ವಿವೇಕ ಚಿಂತನ~ ರಾಜ್ಯ ಮಟ್ಟದ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಜೀವನದಲ್ಲೇ ಮರುಜನ್ಮ ಕಾಣಿರಿ. ಒಂದು ಕಾಲದಲ್ಲಿ ದುರ್ಗುಣಗಳ ಬಾಲಕನಾಗಿದ್ದ ಮೋಹನದಾಸ ಮುಂದೆ ಗಾಂಧೀಜಿಯಾದರು. ದನದ ಕೊಟ್ಟಿಗೆ ಕಾಯುತ್ತಿದ್ದ ಅಬ್ರಹಾಂ ಲಿಂಕನ್ ಮುಂದೆ ಅಮೆರಿಕ ಅಧ್ಯಕ್ಷನಾದ. ಕನ್ನಡದಲ್ಲೇ ಕಲಿತ ಬಡ ಗುಮಾಸ್ತರ ಮಗ ರವಿ ಚನ್ನಣ್ಣವರ್ ಐಪಿಎಸ್ ತೇರ್ಗಡೆಯಾದ ಸಾಧನೆಗಳು ನಮಗೆ ಪ್ರೇರಣೆಯಾಗಬೇಕು. ಕಾಲ್ಪನಿಕತೆಗಿಂತ ಮಾದರಿ ಬದುಕುಗಳು ಆತ್ಮವಿಶ್ವಾಸ ಮೂಡಿಸುತ್ತವೆ ಎಂದರು.

ಅವರ್ಣನೀಯ ಜಾಗೃತ ಶಕ್ತಿಯ ವಿವೇಕಾನಂದರ ಮಾತು ಮೈಸೂರಿನ ಅಂದಿನ ರಾಜರು, ಉದ್ಯಮಿ ರಾಕ್‌ಫೆಲ್ಲರ್ ಮತ್ತಿತರರಿಗೆ  ಸ್ಫೂರ್ತಿಯಾಯಿತು. ವಿವೇಕಾನಂದರ ಮಾತನ್ನು ಇಂದಿನ `ಗುರುಗಳು~ ರಾಜಕಾರಣಿಗಳಿಗೆ ಹೇಳುತ್ತಿದ್ದರೆ ಭಾರತವೇ ಬದಲಾಗುತ್ತಿತ್ತು ಎಂದು ವಿಶ್ಲೇಷಿಸಿದರು.  ತುಮಕೂರು ಆಶ್ರಮದ ಅಧ್ಯಕ್ಷ ಡಾ.ಸ್ವಾಮಿ ವೀರೇಶಾನಂದ ಸರಸ್ವತಿ, ರಾಜ್ಯಸಭಾ ಸದಸ್ಯ ಕೆ.ಬಿ. ಶಾಣಪ್ಪ, ಗುಲ್ಬರ್ಗ ಆಶ್ರಮದ ಸ್ವಾಮಿ ಮಹೇಶ್ವರಾನಂದ, ಸ್ವಾಮಿ ಸುವೇದಾನಂದ ಮತ್ತಿತರರು ಇದ್ದರು.

, ನಿಮ್ಮಳಗಿನ ದೇವರನ್ನು ನಿಸ್ವಾರ್ಥದಿಂದ ನಂಬಿ ಸ್ವಾವಲಂಬನೆ, ಸಾಮರ್ಥ್ಯ, ಶ್ರಮ ವಹಿಸದಿದ್ದರೆ, ಯಾವ ದೇವರೂ ಕೈ ಹಿಡಿಯಲಾರ ಎಂದರು. ರಾಜ್ಯಸಭಾ ಸದಸ್ಯ ಕೆ.ಬಿ. ಶಾಣಪ್ಪ, ಗುಲ್ಬರ್ಗ ಆಶ್ರಮದ ಸ್ವಾಮಿ ಮಹೇಶ್ವರಾನಂದ, ಸ್ವಾಮಿ ಸುವೇದಾನಂದ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT