ADVERTISEMENT

ಶಂಕಿತ ನಕ್ಸಲ್ ಮಹಿಳೆಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST

ಮೈಸೂರು: ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇಲೆ ಬಂಧಿತರಾಗಿ ನಗರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಶಿವಮೊಗ್ಗದ ಆಶಾ ಹೈಕೋರ್ಟ್ ಜಾಮೀನಿನ ಮೇಲೆ ಮಂಗಳವಾರ ಬಿಡುಗಡೆಯಾದರು.

ಉಡುಪಿಯಲ್ಲಿ 2, ಶಿವಮೊಗ್ಗದಲ್ಲಿ ಒಂದು ಪ್ರಕರಣ ಈಕೆಯ ಮೇಲೆ ಇತ್ತು. ಶಿವಮೊಗ್ಗ ಪ್ರಕರಣ ಖುಲಾಸೆಯಾಗಿತ್ತು. ಆಶಾ ಪತಿ ನಂದಕುಮಾರ್ ಇದೇ ಆರೋಪದ ಮೇರೆಗೆ ಬಂಧಿತರಾಗಿದ್ದು, ನಗರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.

2010ರ ಜ. 1ರಿಂದ ಆಶಾ ಅವರು ನಗರ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿದ್ದರು ಎಂದು ಮುಖ್ಯ ಅಧೀಕ್ಷಕ ಪಿ.ಎನ್. ಜಯಸಿಂಹ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.