ADVERTISEMENT

ಸಕಾಲ ಯೋಜನೆಯಡಿ 2.5 ಲಕ್ಷ ಅರ್ಜಿಸ್ವೀಕೃತ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಬೆಂಗಳೂರು: `ಸಕಾಲ~ ಯೋಜನೆಯಡಿ ಇದೇ 9ರವರೆಗೆ 2,55,441 ಅರ್ಜಿಗಳು ಸ್ವೀಕೃತವಾಗಿದ್ದು, 1,64,648 ಅರ್ಜಿಗಳ ವಿಲೇವಾರಿ ಆಗಿದೆ. ವಾಣಿಜ್ಯ ತೆರಿಗೆ ಇಲಾಖೆ ಅತಿ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಈ ಇಲಾಖೆ ಸ್ವೀಕರಿಸಿದ  1,09,529 ಅರ್ಜಿಗಳ ಪೈಕಿ 98,724 ಅರ್ಜಿಗಳು ವಿಲೇವಾರಿ ಆಗಿವೆ.

ಎರಡನೆಯ ಸ್ಥಾನದಲ್ಲಿರುವ ಸಾರಿಗೆ ಇಲಾಖೆ, ತನ್ನಲ್ಲಿ ಸಲ್ಲಿಕೆಯಾದ 15,352 ಅರ್ಜಿಗಳ ಪೈಕಿ 10,826 ಅರ್ಜಿಗಳನ್ನು ವಿಲೇವಾರಿ ಮಾಡಿದೆ ಎಂದು ವಾರ್ತಾ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.