ADVERTISEMENT

ಸಚಿವರ ಅವಹೇಳನ: ದೂರು

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST

ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ದ್ವೇಷ ಹುಟ್ಟುವ ರೀತಿಯಲ್ಲಿ ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಸಂದೇಶ ಹಾಕಿದ್ದಾರೆ ಎಂದು ಆರೋಪಿಸಿ, ನಾಲ್ವರ ವಿರುದ್ಧ, ಸಚಿವರ ಆಪ್ತ ಸಹಾಯಕ ಸುರೇಶ ಶೆಟ್ಟಿ ಇಲ್ಲಿನ ನಗರ ಠಾಣೆಯಲ್ಲಿ ಗುರುವಾರ ರಾತ್ರಿ ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ.

‘ಪೇಜಾವರ ಶ್ರೀಗಳು ಒಬ್ಬ ಹುಚ್ಚರಿದ್ದಾರೆ, ಅವರು ಈ ಹೇಳಿಕೆಯ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಕೇಂದ್ರ ಸಚಿವರು ಹೇಳಿದ್ದಾರೆಂಬಂತೆ ರಾಜೇಶ ಆದಿ ಉಡುಪಿ ಹಾಗೂ ಮಂಚೆ ಗೌಡ ಎಂಬುವವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದು ಶುದ್ಧ ಸುಳ್ಳಿನಿಂದ ಸೃಷ್ಟಿ ಮಾಡಿದ ಹೇಳಿಕೆಯಾಗಿದೆ’ ಎಂದು ಸುರೇಶ ಶೆಟ್ಟಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಅನಂತಕುಮಾರ ಹೆಗಡೆ ಮುಖದ ಚಿತ್ರಕ್ಕೆ ಫೋಟೊಷಾಪ್ ಮಾಡಿ, ಬೇರೆ ದೇಹವನ್ನು ಅಂಟಿಸಿ ವಿಕಾರಗೊಳಿಸಲಾಗಿದೆ. ‘ಕೇಂದ್ರ ಸರ್ಕಾರದ ಹೊಸ ಮಂತ್ರಿ, ಚಡ್ಡಿ ಪುಟ್ಗೋಸಿ ಮಂತ್ರಿ, ಕರ್ನಾಟಕದ ಭಯೋತ್ಪಾದಕ’ ಎಂದು ಅವಹೇಳನಕಾರಿಯಾಗಿ ಬರೆದು, ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಾಕಲಾಗಿದೆ. ಬೈಂದೂರಿನ ‘ಬೈಂದೂರ್ ಫ್ರೆಂಡ್ಸ್‌ ಸೀವ್‌ 24’ ಗ್ರೂಪ್ ಎಡ್ಮಿನ್ ಕುಂದಾಪುರ ಕಿರುಮಂಜೇಶ್ವರದ ವಿಜಯ ಪೂಜಾರಿ ಹಾಗೂ ಇನ್ನೊಬ್ಬ ಅನಾಮಧೇಯ ವ್ಯಕ್ತಿ ಈ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.