ADVERTISEMENT

‘ಸಿ.ಎಂ ಕೋಮು ರಾಜಕೀಯ’

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
‘ಸಿ.ಎಂ ಕೋಮು ರಾಜಕೀಯ’
‘ಸಿ.ಎಂ ಕೋಮು ರಾಜಕೀಯ’   

ಹಾಸನ: ‘ಮಂಗಳೂರು ಗಲಭೆ ನಿಯಂತ್ರಿಸಲು ರಾಜ್ಯ ಗೃಹ ಇಲಾಖೆ ವಿಫಲವಾಗಿದೆ. ಹಿಂದೂ ಸಂಘಟನೆ ಮತ್ತು ವ್ಯಕ್ತಿಗಳನ್ನು ಗುರಿ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಮುವಾದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಶಾಸಕ ಸಿ.ಟಿ.ರವಿ ಇಲ್ಲಿ ಮಂಗಳವಾರ ಆರೋಪಿಸಿದರು.

‘ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರನ್ನೇ ಗೃಹ ಸಚಿವರನ್ನಾಗಿ ಮಾಡಿ. ಆಗ ಎಲ್ಲ ವೈಫಲ್ಯಗಳನ್ನು ಅವರ ತಲೆಗೆ ಕಟ್ಟಬಹುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಲೇವಡಿ ಮಾಡಿದರು.

‘ಗಲಭೆ ನಿಯಂತ್ರಿಸುವ ಬದಲು ಮಾಧ್ಯಮದವರ ಎದುರು ಅಧಿಕಾರಿಗಳನ್ನು ದೂಷಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ’ ಎಂದು ಟೀಕಿಸಿದರು.
‘ಘಟನೆಯಲ್ಲಿ ಮೃತಪಟ್ಟವರ ಕುಟಂಬಗಳಿಗೆ ₹ 10 ಲಕ್ಷ ಪರಿಹಾರ ಕೊಡಬೇಕು. ಕ್ರಿಮಿನಲ್‌ಗಳು ಸತ್ತರೆ ಪರಿಹಾರ ಕೊಡುವ ಸರ್ಕಾರ, ಅಮಾಯಕರ ಸಾವಿಗೆ ಏಕೆ ಪರಿಹಾರ ನೀಡುವುದಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.