ADVERTISEMENT

ಸಿದ್ದರಾಮಯ್ಯ ಕಳ್ಳ ಎತ್ತು, ರಾಹುಲ್‌ ಗಾಂಧಿ ನಕಲಿ ಹಿಂದೂ: ಸಿ.ಟಿ. ರವಿ ಪರೋಕ್ಷ ಟೀಕೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 10:30 IST
Last Updated 22 ಮಾರ್ಚ್ 2018, 10:30 IST
ಸಿ.ಟಿ. ರವಿ (ಸಂಗ್ರಹ ಚಿತ್ರ)
ಸಿ.ಟಿ. ರವಿ (ಸಂಗ್ರಹ ಚಿತ್ರ)   

ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಶೃಂಗೇರಿ ಮಠಕ್ಕೆ ತೆರಳಿ ಭಾರತೀತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿರುವುದಕ್ಕೆ ಬಿಜೆಪಿ ಶಾಸಕ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.‌

ಉಭಯ ನಾಯಕರನ್ನುದ್ದೇಶಿಸಿ ಟ್ವೀಟ್ ಮಾಡಿರುವ ರವಿ, ‘ನಕಲಿ ಹಿಂದೂ’ ಮತ್ತು ‘ಮನೆ ಮುರುಕ ಕಳ್ಳ ಎತ್ತು’ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.

‘ಕೆಲವೇ ದಿನಗಳ ಹಿಂದೆ ಹಿಂದೂ ದೇವಾಲಯ ಮತ್ತು ಮಠಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿದ ‘‘ಕಳ್ಳ ಎತ್ತು’’ ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬ ನಕಲಿ ಹಿಂದೂವಿನ ಜತೆ ವೋಟಿಗಾಗಿ ಅದೇ ಮಠಗಳಿಗೆ ಭೇಟಿ ಕೊಟ್ಟು ಅತಿ ವಿನಯ ಪ್ರದರ್ಶಿಸುತ್ತಿರುವುದು ಮನೆ ಮುರುಕ ಕಳ್ಳ ಎತ್ತಿನ ನೀಚ ರಾಜಕಾರಣಕ್ಕೆ ಸಾಕ್ಷಿ. #ಹಿಂದೂವಿರೋಧಿಕಾಂಗ್ರೆಸ್’ ಎಂದು ರವಿ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.