ಬೆಂಗಳೂರು:ಕರ್ನಾಟಕ ಲೇಖಕಿಯರ ಸಂಘವು ಉದಯೋನ್ಮುಖ ಲೇಖಕಿಯರಿಗೆ ತ್ರಿವೇಣಿ ಅವರ ಹೆಸರಿನಲ್ಲಿ ನೀಡುವ ಪ್ರಥಮ ಪ್ರಶಸ್ತಿಗೆ ಈ ಬಾರಿ, ‘ಪ್ರಜಾವಾಣಿ’ಯ ಉಪ ಸಂಪಾದಕಿ ಸುಶೀಲಾ ಡೋಣೂರ ಅವರ ‘ನ್ಯಾನ್ಸಿ’ ಕಾದಂಬರಿ ಆಯ್ಕೆಯಾಗಿದೆ.
ತ್ರಿವೇಣಿಯವರ ಹೆಸರಿನಲ್ಲಿ ಅವರ ಕುಟುಂಬದವರು ಇರಿಸಿರುವ ದತ್ತಿ ನಿಧಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಭುವನಾ ಸುರೇಶ್ ಅವರ ‘ಸಖಿ ಯಾರೇ ನಿನ್ನವನು?’ ಮತ್ತು ಎಸ್.ಜಿ. ಮಾಲತಿ ಶೆಟ್ಟಿ ಅವರ ‘ಶೋಕವನದಿ ಸೀತೆ’ ಕಾದಂಬರಿಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಬಹುಮಾನಕ್ಕೆ ಆಯ್ಕೆಯಾಗಿವೆ ಎಂದು ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ತಿಳಿಸಿದ್ದಾರೆ.
ಪ್ರಥಮ ಪ್ರಶಸ್ತಿ ₨5,000, ದ್ವಿತೀಯ ಪ್ರಶಸ್ತಿ ₨ 3,000 ಮತ್ತು ತೃತೀಯು ಪ್ರಶಸ್ತಿ ₨ 2,000 ನಗದನ್ನು ಒಳಗೊಂಡಿದೆ. ಇದೇ 12ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಹಿತಿ ಶೂದ್ರ ಶ್ರೀನಿವಾಸ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.