ADVERTISEMENT

ಸೌಂದರ್ಯಲಹರೀ ಪಾರಾಯಣ ಆರಂಭ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 10:36 IST
Last Updated 29 ಅಕ್ಟೋಬರ್ 2017, 10:36 IST
ಸೌಂದರ್ಯಲಹರೀ ಪಾರಾಯಣ ಆರಂಭ
ಸೌಂದರ್ಯಲಹರೀ ಪಾರಾಯಣ ಆರಂಭ   

ಬೆಂಗಳೂರು: ಅರಮನೆ ಮೈದಾನದಲ್ಲಿ ಸಾವಿರಾರು ಮಂದಿ ಒಕ್ಕೊರಲಿನಿಂದ 'ಸೌಂದರ್ಯಲಹರೀ' ಪಾರಾಯಣ ಆರಂಭಿಸಿದರು. ಎರಡು ಗಂಟೆಗೆ ಆರಂಭವಾದ ಸೌಂದರ್ಯಲಹರೀ ಪಾರಾಯಣ 2:45ಕ್ಕೆ ಸಂಪನ್ನವಾಯಿತು.

ಇದೀಗ 'ದಕ್ಷಿಣಮೂರ್ತ್ಯಷ್ಟಕ'ದ ಪಾರಾಯಣ ಆರಂಭವಾಗಿದೆ. ಆತುರ, ಕಾತರವಿಲ್ಲದ ಮಂತ್ರದ ಅಲೆಗಳು ಇಡೀ ವಾತಾವರಣಕ್ಕೆ ಪ್ರಫುಲ್ಲತೆ ತುಂಬಿದೆ. ತುಂಬುನದಿಯ ಮಂದ ಪ್ರವಾಹದಂತೆ ಮಂತ್ರದ ಅಲೆಗಳು ಸಹಸ್ರಾರು ಕಂಠದಿಂದ ಓತಪ್ರೋತವಾಗಿ ತೇಲಿ ಬರುತ್ತಿವೆ.

ಸಾವಿರಗಟ್ಟಲೆ ಜನರು ಒಂದೇ ಧಾಟಿಯಲ್ಲಿ ಇಂಪಾಗಿ ಹಾಡಿದ್ದು ಸಂಘಟಕರ ಸಾಮರಸ್ಯದ ಆಶಯವನ್ನೂ ಬಿಂಬಿಸುವಂತಿತ್ತು.

ADVERTISEMENT

ಮಂತ್ರೋಚ್ಚಾರಣೆಯ ನಂತರ ಎರಡು ನಿಮಿಷದ ಮೌನವನ್ನು ಸಾಧಕರು ಆಹ್ವಾನಿಸಿಕೊಂಡರು. ಆ ಮೂಲಕ ವಾತಾವರಣದ ತುಂಬೆಲ್ಲ ಪಸರಿಸಿದ್ದ ಮಂತ್ರಶಕ್ತಿಯ ಅನುಭವವನ್ನು ಪಡೆದುಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಣಲು ಸಭೆ ಈಗ ಕಾತರದಿಂದ ಕಾಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.