ADVERTISEMENT

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 7:05 IST
Last Updated 9 ಅಕ್ಟೋಬರ್ 2017, 7:05 IST
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ನಿವೃತ್ತಿ
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ನಿವೃತ್ತಿ   

ಬೆಂಗಳೂರು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಸೋಮವಾರ ನಿವೃತ್ತರಾದರು. 

ಮುಖ್ಯ ನ್ಯಾಯಮೂರ್ತಿ ಸುಬ್ರೊ ಕಮಲ್‌ ಮುಖರ್ಜಿ ಅವರ ನಿವೃತ್ತಿ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಂಘ‌ ಮತ್ತು ರಾಜ್ಯ ವಕೀಲರ ಪರಿಷತ್ ಅಧಿಕೃತ ಬೀಳ್ಕೊಡುಗೆ ನೀಡಲಿಲ್ಲ.

ಸೋಮವಾರ ನಡೆದ ಕೊನೆಯ ಕಲಾಪದಲ್ಲಿ ಹಿರಿಯ ವಕೀಲ ಉದಯ್ ಹೊಳ್ಳ ಅವರು ಮುಖ್ಯ ನ್ಯಾಯಮೂರ್ತಿಗೆ ಶುಭಾಶಯ ಕೋರಿದರು. 

ADVERTISEMENT

ಕಲಾಪ ಮುಗಿಸಿದ ಕೊಡಲೇ ಸಿಜೆ ಎಸ್.ಕೆ. ಮುಖರ್ಜಿ ಹೈಕೋರ್ಟ್ ನಿಂದ ಮನೆಗೆ ತೆರಳಿದರು. 

ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಅವರ ಆಡಳಿತ ವೈಖರಿ ವಿರೋಧಿಸಿ ಕಳೆದ ವಾರ ವಕೀಲರು ಹೈಕೋರ್ಟ್ ಕಲಾಪಗಳಿಂದ ಹೊರಗುಳಿದಿದ್ದರು.

(ನ್ಯಾ.ಎಚ್.ಜಿ.ರಮೇಶ್‌)

ಹಿರಿಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಅವರನ್ನು ರಾಜ್ಯ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ(ಸಿ.ಜೆ) ನೇಮಕ ಮಾಡಲಾಗಿದೆ. ರಮೇಶ್‌ ಅವರು ಸದ್ಯ ಕರ್ನಾಟಕ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿ. ಇದೇ 10ರಿಂದ ಅವರು ಹಂಗಾಮಿ ಸಿ.ಜೆ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.