
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ 4ನೇ ಶನಿವಾರವನ್ನು ಸಾರ್ವತ್ರಿಕ ರಜೆ ಎಂದು ಘೋಷಿಸಿದ ಬಳಿಕ ಶಿಕ್ಷಕರಿಗೆ ಸಾಂದರ್ಭಿಕ ರಜೆ 15ರಿಂದ 10ಕ್ಕೆ ಕುಸಿದಿದೆ. ಅವರಿಗೆ 2ನೇ ಮತ್ತು 4ನೇ ಶನಿವಾರದ ರಜೆ ಇಲ್ಲವಾದ ಕಾರಣ ಈ ಹಿಂದಿನಂತೆ 15 ದಿನಗಳ ಸಾಂದರ್ಭಿಕ ರಜೆಯನ್ನು ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಆಗ್ರಹಿಸಿದೆ.
ಸಾಂದರ್ಭಿಕ ರಜೆಯನ್ನು ಹೆಚ್ಚಿಸದೆ ಹೋದರೆ 2ನೇ ಮತ್ತು 4ನೇ ಶನಿವಾರವನ್ನು ಶಿಕ್ಷಕರಿಗೆ ರಜೆ ಎಂಬಂತೆ ಘೋಷಿಸಬೇಕು ಎಂದು ಸಂಘದ ಗೌರವಾಧ್ಯಕ್ಷ ಅರುಣ ಶಹಾಪೂರ ಮತ್ತು ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
‘ಬೋಧಕ ಸಿಬ್ಬಂದಿಗೆ ವಾರ್ಷಿಕ ರಜೆ 152 ಇದ್ದರೆ, ಬೋಧಕೇತರರಿಗೆ 164 ರಜೆ ಇದೆ. ಸಂದರ್ಭಾನುಸಾರ ಶಾಲೆಗಳಿಗೆ ರಜೆ ನೀಡಿದರೆ ಶನಿವಾರ ಮತ್ತು ಭಾನುವಾರ ಶಾಲೆಗಳನ್ನುನಡೆಸಿ ಸರಿದೂಗಿಸಲಾಗುತ್ತಿದೆ. ರಜೆಯ ಅವಧಿಯಲ್ಲಿ ತರಬೇತಿ,ಗಣತಿ, ಚುನಾವಣೆ ಮತ್ತಿತರ ಕಾರ್ಯಗಳಿಗಾಗಿ ಶಿಕ್ಷಕರ ರಜೆಗಳು ಕೆಲಸದ ದಿನಗಳಾಗಿ ಬದಲಾಗುತ್ತವೆ. ಹೀಗಾಗಿ ಶಿಕ್ಷಕರಿಗೆ ಆಗಿರುವ ತಾರತಮ್ಯವನ್ನು ನಿವಾರಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.