ADVERTISEMENT

ಬಂಡಿಗೆ 15 ಟನ್‌ ಕಬ್ಬು ತುಂಬಿ ಎತ್ತುಗಳಿಗೆ ಹಿಂಸೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 16:05 IST
Last Updated 23 ನವೆಂಬರ್ 2020, 16:05 IST
ಎತ್ತಿನ ಬಂಡಿಗೆ ತುಂಬಲಾಗಿದ್ದ ಕಬ್ಬು
ಎತ್ತಿನ ಬಂಡಿಗೆ ತುಂಬಲಾಗಿದ್ದ ಕಬ್ಬು    

ಮಂಡ್ಯ: ದಾಖಲೆ ನಿರ್ಮಾಣಕ್ಕಾಗಿ ಎತ್ತಿನಗಾಡಿಗೆ 15 ಟನ್‌ ಕಬ್ಬು ತುಂಬಿ, ಎಳೆಸಿ ಜೋಡೆತ್ತುಗಳಿಗೆ ಹಿಂಸಿಸಿದ ಆರೋಪದ ಮೇಲೆ ತಾಲ್ಲೂಕಿನ ಎಚ್‌.ಮಲ್ಲಿಗೆರೆ ಗ್ರಾಮದ ಯುವಕರ ವಿರುದ್ಧ ಸೋಮವಾರ ಕೆರಗೋಡು ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿದ್ದಾರೆ.

ಎಚ್‌.ಮಲ್ಲಿಗೆರೆ ಗ್ರಾಮದ ವಿನಾಯಕ ಗೆಳೆಯರ ಬಳಗದ ಯುವಕರು ಸವಾಲು ಪೂರ್ಣಗೊಳಿಸುವುದಕ್ಕಾಗಿ ಎತ್ತಿನ ಗಾಡಿಗೆ 14.55 ಟನ್‌ ಕಬ್ಬು ತುಂಬಿ ಮೂರು ಕಿ.ಮೀ.ವರೆಗೆ ಎಳೆಸಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪರಿಣಾಮ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ಎತ್ತುಗಳಿಗೆ ಹಿಂಸಿಸಿದ ಯುವಕರ ಮೇಲೆ ಪ್ರಕರಣ ದಾಖಲು ಮಾಡುವ ಒತ್ತಾಯ ಕೇಳಿಬಂದಿತ್ತು.

ದಾಖಲೆ ನಿರ್ಮಾಣ ಕಾರ್ಯದ ನೇತೃತ್ವ ವಹಿಸಿದ್ದ ಯುವಕ ಚಿರಂತ್‌ ಹಾಗೂ ಇತರರ ವಿರುದ್ಧ ಕೆರಗೋಡು ಠಾಣೆ ಪೊಲೀಸರು ಪಾಣಿ ಹಿಂಸೆ ತಡೆ ಕಾಯ್ದೆ (ಪಿಸಿಎ) ಅಡಿ ದೂರು ದಾಖಲು ಮಾಡಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.