ADVERTISEMENT

‌ರಾಜ್ಯದ 28 ವಿಶ್ವವಿದ್ಯಾಲಯಗಳ ಪೈಕಿ 16 ವಿವಿಗಳಿಗೆ ನ್ಯಾಕ್‌ ಮಾನ್ಯತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 20:30 IST
Last Updated 23 ನವೆಂಬರ್ 2021, 20:30 IST
ನ್ಯಾಕ್
ನ್ಯಾಕ್   

ಬೆಂಗಳೂರು: ರಾಜ್ಯದ 28 ವಿಶ್ವವಿದ್ಯಾಲಯಗಳ ಪೈಕಿ, 16 ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌ (ನ್ಯಾಕ್‌) ಮಾನ್ಯತೆ ಪಡೆದಿಲ್ಲ.

1980ರ ನಂತರ ಸ್ಥಾಪನೆಯಾದ ಕೆಲವು ವಿಶ್ವವಿದ್ಯಾಲಯಗಳು ಇನ್ನೂ ಮಾನ್ಯತೆ ಪಡೆದಿಲ್ಲ. 2010ರ ನಂತರ ಆರಂಭವಾದ ಕೆಲವು ವಿಶ್ವವಿದ್ಯಾಲಯಗಳುನ್ಯಾಕ್‌ ಮಾನ್ಯತೆ ಪಡೆಯಲು ಅಗತ್ಯವಾದ ಅರ್ಹತೆಯನ್ನೇ ಪಡೆದಿಲ್ಲ.

ದೇಶದಾದ್ಯಂತ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು 2013ರ ನಂತರ ನ್ಯಾಕ್‌ ಮಾನ್ಯತೆ ಪಡೆಯುವುದು ಕಡ್ಡಾಯವಾಗಿದೆ. ಆದರೂ, ಕೆಲವು ವಿದ್ಯಾಲಯಗಳು ಇನ್ನೂ ಮಾನ್ಯತೆಗೆ ಅರ್ಜಿಯನ್ನೇ ಸಲ್ಲಿಸಿಲ್ಲ. ರಾಜ್ಯದ ಸರ್ಕಾರಿ ಸಂಸ್ಥೆಗಳಲ್ಲಿ ಶಿಕ್ಷಣ ಗುಣಮಟ್ಟ ಸುಧಾರಿಸಲು ನ್ಯಾಕ್‌ ಮಾನ್ಯತೆ ಸ್ಥಿತಿ ಮತ್ತು ಶಿಫಾರಸುಗಳ ಕುರಿತು ಬಿಡುಗಡೆ ಮಾಡಿದ ವರದಿಯಿಂದ ಈ ಅಂಶ ಬಹಿರಂಗವಾಗಿದೆ.

ADVERTISEMENT

‘16 ವಿದ್ಯಾಲಯಗಳಲ್ಲಿ ಕೆಲವು ಮಾನ್ಯತೆಗಾಗಿ ಈಗಾಗಲೇ ಅರ್ಜಿ ಸಲ್ಲಿಸಿವೆ’ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

‘ನ್ಯಾಕ್‌ ಮಾನ್ಯತೆಗಾಗಿ ಅರ್ಜಿ ಸಲ್ಲಿಸುವಂತೆ ನಾವು ಈಗಾಗಲೇ ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ್ದೇವೆ. ಕೆಲವು ವಿಶ್ವವಿದ್ಯಾಲಯಗಳು ಇತ್ತೀಚೆಗೆ ಆರಂಭವಾಗಿವೆ. ಅರ್ಜಿ ಸಲ್ಲಿಸಲು 5 ವರ್ಷ ತುಂಬಬೇಕಿದೆ’ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.