
ಹಾಸನ: ‘ರಾಜ್ಯದಲ್ಲಿ ಹೊಸದಾಗಿ 210 ನ್ಯಾಯಬೆಲೆ ಅಂಗಡಿಗಳನ್ನು ಶೀಘ್ರದಲ್ಲಿಯೇ ತೆರೆಯುವ ಚಿಂತನೆ ಇದೆ’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಇಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ನಡೆದಿದೆ. ಹೊಸ ಕಾರ್ಡ್‌ಗಳ ವಿತರಣೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಬಿಪಿಎಲ್ ಕಾರ್ಡ್ ಹೊಂದಲು ಸದ್ಯ ₹1.80 ಲಕ್ಷ ವಾರ್ಷಿಕ ಆದಾಯ ನಿಗದಿಮಾಡಲಾಗಿದೆ. ಕನಿಷ್ಠ ಕೂಲಿ ₹400 ರಿಂದ ₹500 ಇರುವುದರಿಂದ ಈ ನಿಯಮ ಪರಿಷ್ಕರಿಸಲು ಮನವರಿಕೆ ಮಾಡಲಾಗುವುದು. ಕೇಂದ್ರದ ಅನುಮತಿ ಪಡೆದು ಆದಾಯ ವಿನಾಯಿತಿ ನೀಡುವ ಚಿಂತನೆ ರಾಜ್ಯ ಸರ್ಕಾರಕ್ಕಿದೆ’ ಎಂದು ಹೇಳಿದರು.
‘ಆದಾಯ ತೆರಿಗೆ ಪಾವತಿಸುತ್ತಿರುವ ಸುಮಾರು 7 ಲಕ್ಷ ಬಿಪಿಎಲ್ ಕಾರ್ಡ್‌ದಾರರನ್ನು ಎಪಿಎಲ್‌ಗೆ ಬದಲಾಯಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.