ADVERTISEMENT

2ಎ ಮೀಸಲಾತಿ | ಸಿಎಂ ನಿವಾಸದ ಎದುರು ಜೂನ್ 27ರಂದು ಧರಣಿ: ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 31 ಮೇ 2022, 7:41 IST
Last Updated 31 ಮೇ 2022, 7:41 IST
ಜಯಮೃತ್ಯುಂಜಯ ಸ್ವಾಮೀಜಿ
ಜಯಮೃತ್ಯುಂಜಯ ಸ್ವಾಮೀಜಿ   

ಹುಬ್ಬಳ್ಳಿ:‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿ ನಿವಾಸದ ಎದುರು ಜೂನ್ 27ರಂದು ಧರಣಿ ನಡೆಸಲಾಗುವುದು’ಎಂದು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಂಚಮಸಾಲಿ ಸಮಾಜ ಮುಖ್ಯಮಂತ್ರಿ ಅವರ ಮೇಲೆ ಭರವಸೆ ಇಟ್ಟಿದೆ. ಆದರೆ, ಅವರು ಅದನ್ನು ಕಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮೀಸಲಾತಿ ನೀಡುವ ಕುರಿತು ಅವರು ತಮ್ಮ ನಿಲುವು ಏನೆಂಬುದನ್ನು ಕೂಡಲೇ ಸ್ಪಷ್ಟಪಡಿಸಬೇಕು’ಎಂದು ಆಗ್ರಹಿಸಿದರು.

‘ಶಿಗ್ಗಾವಿ ಕ್ಷೇತ್ರದ ಪಂಚಮಸಾಲಿ ಸಮಾಜದವರು ಬೊಮ್ಮಾಯಿ ನಂಬಿಕಸ್ಥರು ಅಲ್ಲ‌ ಎಂದಿದ್ದರು. ಆದರೂ ನಾವು ನಿಮ್ಮ ಮೇಲೆ ನಂಬಿಕೆ ಇಟ್ಟೆದ್ದೆವು. ರಾಣಿ ಚನ್ನಮ್ಮನ ಜಯಂತಿ ದಿನದಿಂದ ನೀವು ಕಣ್ಣೀರು ಹಾಕಿ, ‘ನಮಗೆ ರೊಟ್ಟಿ ಕೊಟ್ಟಿದ್ದಿರಿ, ನಿಮ್ಮನ್ನು ನಾನು ಕೈ ಬಿಡೋದಿಲ್ಲ’ಎಂದು ಹೇಳಿದ್ದೀರಿ. ಈಗ ಮೀಸಲಾತಿ ನೀಡಲು ನಿಮಗೆ ಯಾಕೆ ಸಾಧ್ಯವಾಗುತ್ತಿಲ್ಲ? ಮೊದಲು ಸಮಾಜದ ಬಡ ಮಕ್ಕಳ ಕಣ್ಣೀರು ಒರೆಸುವ ಕೆಲಸ‌ ಮಾಡಿ. ಯಾರದ್ದೋ ಮಾತು ಕೇಳಿ, ಮೀಸಲಾತಿ ನೀಡುವ ವಿಚಾರದಲ್ಲಿ ಹಿಂದೇಟು ಹಾಕಬೇಡಿ’ಎಂದು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.