ADVERTISEMENT

ಮಾದಕವಸ್ತು ಜಾಲ: 9 ಯುವಕರ ಬಂಧನ

ಪಿಟಿಐ
Published 31 ಜನವರಿ 2019, 20:32 IST
Last Updated 31 ಜನವರಿ 2019, 20:32 IST

ಮುಜಾಫರ್‌ನಗರ: ಉತ್ತರ ಪ್ರದೇಶದ ಶಮ್ಲಿ ಜಿಲ್ಲೆಯಲ್ಲಿ ಮೂವರು ಎಂಜಿನಿಯರ್ ವಿದ್ಯಾರ್ಥಿಗಳು ಸೇರಿ ಒಂಬತ್ತು ಜನರನ್ನು ಮಾದಕವಸ್ತು ಜಾಲದಲ್ಲಿ ಬಂಧಿಸಲಾಗಿದ್ದು, ಆರು ಕಿ.ಗ್ರಾಂ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಭುರಾ ಹಳ್ಳಿಯಲ್ಲಿ ನಡೆಸಿದ ದಾಳಿಯಲ್ಲಿ ಆರು ಕಿ.ಗ್ರಾಂ. ನಷ್ಟು ಟೋಡ್ ಹಾಗೂ 35 ಗ್ರಾಂಗಳಷ್ಟು ಸ್ಮ್ಯಾಕ್ ಅನ್ನು ಯುವಕರಿಂದ ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಅಜಯ್ ಕುಮಾರ್ ಪಾಂಡೆ ಪಿಟಿಐಗೆ ತಿಳಿಸಿದ್ದಾರೆ.

ಆರೋಪಿಗಳಿಗೆ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.