ADVERTISEMENT

ಮೊದಲೇ ಇತ್ತು ವಿಶ್ವ ಲಿಂಗಾಯತ ಪರಿಷತ್‌

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 19:30 IST
Last Updated 19 ಜನವರಿ 2018, 19:30 IST

ಹುಬ್ಬಳ್ಳಿ: ಈಗಾಗಲೇ ವಿಶ್ವ ಲಿಂಗಾಯತ ಪರಿಷತ್‌ ಹೆಸರಿನಲ್ಲಿ ಸಂಸ್ಥೆ ಅಸ್ತಿತ್ವದಲ್ಲಿರುವುದರಿಂದ ಮತ್ತೆ ಅದೇ ಹೆಸರಿನಲ್ಲಿ ಪರಿಷತ್‌ ರಚಿಸಬಾರದು. ಅದೇ ಹೆಸರಿನಲ್ಲಿ ರಚಿಸಲು ಮುಂದಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ರಾಜಶೇಖರ ಕುಬುಸದ ಎಚ್ಚರಿಸಿದ್ದಾರೆ.

‘ಮೂರು ವರ್ಷದಿಂದ ಹುಬ್ಬಳ್ಳಿಯಲ್ಲಿ ಸಂಸ್ಥೆ ಅಸ್ತಿತ್ವದಲ್ಲಿದೆ. ಸಮಾಜದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಬೇರೆ ಹೆಸರು ಇಟ್ಟುಕೊಳ್ಳಿ ಎಂದು ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಸಂಚಾಲಕ ಎಸ್‌.ಎಂ. ಜಾಮದಾರ ಅವರಿಗೆ ಜ.13ರಂದು ದೂರವಾಣಿ ಮೂಲಕ ತಿಳಿಸಿದ್ದೆ’ ಎಂದು ‍ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬದಲಾವಣೆಗೆ ಒಪ್ಪಿಗೆ ಸೂಚಿಸಿದ್ದ ಜಾಮದಾರ ಅವರು, ಜ.14 ರಂದು ಮತ್ತೆ ಅದೇ ಹೆಸರಿನಲ್ಲಿ ಸಂಸ್ಥೆ ಆರಂಭಿಸುವುದಾಗಿ ಘೋಷಿಸಿ ಕಾನೂನು ಉಲ್ಲಂಘಿಸಿದ್ದಾರೆ. ಬೇರೆ ಹೆಸರಿನಲ್ಲಿ ಸಂಸ್ಥೆ ಆರಂಭಿಸುವ ಬಗ್ಗೆ ಕೂಡಲೇ ಪ್ರಕಟಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.