ADVERTISEMENT

ಪದೇ ಪದೆ ಬಂದ್ ಮಾಡುವುದರಿಂದ ಜನರಿಗೆ ತೊಂದರೆ, ಯಾರನ್ನು ಕೇಳಿ ಬಂದ್ ಕರೆ ನೀಡಿದ್ದೀರಿ? ವಾಟಾಳ್‌ಗೆ ಹೋರಾಟಗಾರರ ಪ್ರಶ್ನೆ!

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 7:39 IST
Last Updated 21 ಜನವರಿ 2018, 7:39 IST
ಪದೇ ಪದೆ ಬಂದ್ ಮಾಡುವುದರಿಂದ ಜನರಿಗೆ ತೊಂದರೆ, ಯಾರನ್ನು ಕೇಳಿ ಬಂದ್ ಕರೆ ನೀಡಿದ್ದೀರಿ? ವಾಟಾಳ್‌ಗೆ ಹೋರಾಟಗಾರರ ಪ್ರಶ್ನೆ!
ಪದೇ ಪದೆ ಬಂದ್ ಮಾಡುವುದರಿಂದ ಜನರಿಗೆ ತೊಂದರೆ, ಯಾರನ್ನು ಕೇಳಿ ಬಂದ್ ಕರೆ ನೀಡಿದ್ದೀರಿ? ವಾಟಾಳ್‌ಗೆ ಹೋರಾಟಗಾರರ ಪ್ರಶ್ನೆ!   

ಹುಬ್ಬಳ್ಳಿ: ಪದೇ ಪದೆ ಬಂದ್ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತಿದೆ, ಯಾರನ್ನು ಕೇಳಿ ಬಂದ್ ಕರೆ ನೀಡಿದ್ದೀರಿ? ಎಂದು ಕಳಸಾ ಬಂಡೂರಿ ಹೋರಾಟದ ಮುಖಂಡರು ವಾಟಾಳ್ ನಾಗರಾಜ್ ಅವರನ್ನು ಪ್ರಶ್ನಿಸುವ ಮೂಲಕ ಇದೇ 25ರ ಬಂದ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಬಂದ್ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವಾಟಾಳ್ ನಾಗರಾಜ್ ಅವರನ್ನು ಕಳಸಾ ಬಂಡೂರಿ ಹೋರಾಟದ ಮುಖಂಡರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪತ್ರಿಕಾಗೋಷ್ಠಿಯಿಂದ ಹೊರ ನಡೆಯಲು ವಾಟಾಳ್ ನಾಗರಾಜ್‌ ಯತ್ನಿಸಿದರು.

ಕಳಸಾ ಬಂಡೂರಿ ಹೋರಾಟದ ಸಮನ್ವಯ ಸಮಿತಿಯಿಂದ ಬಂದ್‌ಗೆ ಬೆಂಬಲವಿಲ್ಲ ಎಂದು ಮುಖಂಡರು ತಿಳಿಸಿದರು. ಪ್ರಧಾನಮಂತ್ರಿ ರಾಜ್ಯಕ್ಕೆ ಭೇಟಿ‌ನೀಡುವ ಸಮಯಲ್ಲಿ‌ ಬಂದ್ ಮಾಡಿ,  ಈಗಾಗಲೇ ಹತ್ತಾರು ಬಂದ್ ಮಾಡಿದ್ದೇವೆ. ಬಂದ್ ನಿಂದ ಯಾವುದೇ ಪ್ರಯೋಜನವಿಲ್ಲ. ಇದು ಹತ್ತರಲ್ಲಿ ಹನ್ನೊಂದನೆಯ ಬಂದ್ ಆಗಲಿದೆ ಎಂದು ಮುಖಂಡರು ತಿಳಿಸಿದರು.

ADVERTISEMENT

ನಿಮ್ಮ ಕೂಗಾಟಕ್ಕೆ ಬಂದ್‌ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್ ನಾಗರಾಜ್‌ ಮತ್ತು ಕನ್ನಡ ಸಂಘಟನೆಗಳ ಮುಖಂಡರು ಸುದ್ದಿಗೋಷ್ಠಿ ಯಿಂದ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.