ADVERTISEMENT

ಚಾರ್ಮಾಡಿ ಘಾಟಿ: ನಿಷೇಧವಿದ್ದರೂ ಬೃಹತ್‌ ಲಾರಿಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST
ಮೂಡಿಗೆರೆ ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234ರ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸೋಮವಾರ ಕಂಡು ಬಂದ ಘನ ವಾಹನಗಳು.
ಮೂಡಿಗೆರೆ ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234ರ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸೋಮವಾರ ಕಂಡು ಬಂದ ಘನ ವಾಹನಗಳು.   

ಮೂಡಿಗೆರೆ: ತಾಲ್ಲೂಕಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಬೃಹತ್‌ ವಾಹಗಳ ಸಂಚಾರ ನಿಷೇಧಿಸಿದ್ದರೂ 10 ಚಕ್ರದ ಲಾರಿಗಳು ಸೇರಿದಂತೆ ಘನ ವಾಹನಗಳು ಸಂಚರಿಸುತ್ತಿರುವುದರಿಂದ ಹೆದ್ದಾರಿ ಸಂಚಾರ ದುಸ್ತರವಾಗಿದೆ.

ಶಿರಾಡಿ ಘಾಟಿ ಬಂದ್‌ ಮಾಡಿದ ನಂತರ ಲಘು ವಾಹನಗಳಿಗೆ ಕರಾವಳಿ ತಲುಪಲು ಚಾರ್ಮಾಡಿ ಘಾಟಿ ಮೂಲಕ ಅವಕಾಶ ಕಲ್ಪಿಸಿದ್ದು, ಘನ ವಾಹಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಆದರೆ, ನಿಷೇಧವಿದ್ದರೂ ಹಗಲು–ರಾತ್ರಿ ಘನ ವಾಹನಗಳು ಸಂಚರಿಸುತ್ತಿರುವುದರಿಂದ, ಘಾಟಿಯ ಹಿಮ್ಮುರಿ ತಿರುವುಗಳಲ್ಲಿ, ಲಾರಿಗಳು ಸರಾಗವಾಗಿ ಚಲಿಸಲಾರದೇ, ಗಂಟೆಗಟ್ಟಲೇ ಟ್ರಾಫಿಕ್‌ ಜಾಮ್‌ ಆಗುತ್ತಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.