ADVERTISEMENT

ಮಾರ್ಚ್ 23ರಿಂದ ದೆಹಲಿಯಲ್ಲಿ ರೈತಪರ ಚಳವಳಿ: ಅಣ್ಣಾ ಹಜಾರೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 4:35 IST
Last Updated 30 ಜನವರಿ 2018, 4:35 IST
ಮುರುಘಾ ಮಠಕ್ಕೆ ಭೇಟಿ ನೀಡಿದ ಅಣ್ಣಾ ಹಜಾರೆ
ಮುರುಘಾ ಮಠಕ್ಕೆ ಭೇಟಿ ನೀಡಿದ ಅಣ್ಣಾ ಹಜಾರೆ   

ಚಿತ್ರದುರ್ಗ: ಕೃಷಿಕರ ಸಮಸ್ಯೆಗಳು ಪ್ರಧಾನ ವಿಷಯವಾಗಿ ಚರ್ಚೆಯಾಗಬೇಕು, ದೇಶ ಸೇವಕರಾಗಿರುವ ಕೃಷಿಕರಿಗೂ ಪಿಂಚಣಿ ಕೊಡಬೇಕು ಎಂಬ ಬೇಡಿಕೆಗಳೊಂದಿಗೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಮಾರ್ಚ್ 23ರಿಂದ ಬೃಹತ್ ರೈತ ಚಳವಳಿ ಆರಂಭಿಸಲಾಗುವುದು ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ತಿಳಿಸಿದರು.

ಇಲ್ಲಿನ ಮುರುಘಾಮಠಕ್ಕೆ ಮಂಗಳವಾರ ಭೇಟಿ‌ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶದಲ್ಲಿ 12 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವ ಸರ್ಕಾರಗಳೂ ರೈತರ‌ ಸಮಸ್ಯೆಗಳಿಗೆ ಪರಿಹಾರ ನೀಡಲಿಲ್ಲ. ಕೃಷಿ‌ ಕ್ಷೇತ್ರ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ‌ ಕೃಷಿ‌ ಕ್ಷೇತ್ರದ‌ ಸಮಸ್ಯೆಗಳ‌ ಪರಿಹಾರಕ್ಕೆ ಒತ್ತಾಯಿಸಿ ಚಳವಳಿ ನಡೆಸಲಾಗುತ್ತದೆ ಎಂದರು.

ADVERTISEMENT

ಸಂವಿಧಾನ ಬದಲಾಯಿಸುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅಣ್ಣಾ ಹಜಾರೆ, ‘ನಮ್ಮ ಸಂವಿಧಾನ ಚೆನ್ನಾಗಿದೆ. ಎಲ್ಲರಿಗೂ ಬದುಕುವ ಹಕ್ಕು ಕೊಟ್ಟಿದೆ. ಅದನ್ನು ಏಕೆ ಬದಲಾಯಿಸಬೇಕು. ಸಂವಿಧಾನವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ' ಎಂದರಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.