ADVERTISEMENT

ಧಾರ್ಮಿಕ ವಿಧಿ ವಿಧಾನ ಆರಂಭ ಇಂದು

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ಧಾರ್ಮಿಕ ವಿಧಿ ವಿಧಾನ ಆರಂಭ ಇಂದು
ಧಾರ್ಮಿಕ ವಿಧಿ ವಿಧಾನ ಆರಂಭ ಇಂದು   

ಶ್ರವಣಬೆಳಗೊಳ: ಫೆ. 17ರಿಂದ 25ರ ವರೆಗೆ ಇಲ್ಲಿ ನಡೆಯುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವ ಸಿದ್ಧತಾ ಧಾರ್ಮಿಕ ವಿಧಿ ವಿಧಾನಗಳು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಫೆ.2ರಿಂದ ಆರಂಭವಾಗುತ್ತಿವೆ.

ಪೂರ್ವ ಪರಂಪರೆಯಂತೆ ಬೆಳಿಗ್ಗೆ ನಾಂದಿ ಮಂಗಲಪೂಜೆ ನಿಮಿತ್ತ ಕ್ಷೇತ್ರದ ವಿಂಧ್ಯಗಿರಿ, ಚಂದ್ರಗಿರಿ ಹಾಗೂ ನಗರದ ಎಲ್ಲ ಬಸದಿಗಳಲ್ಲಿ ಏಕಕಾಲಕ್ಕೆ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ಪೂಜೆ, ಶಾಸನ ದೇವತೆಗಳಿಗೆ ಪೂಜೆ ಮತ್ತು ಮಹಾಮಸ್ತಕಾಭಿಷೇಕದ ಪೂಜಾದ್ರವ್ಯಗಳ ಸಂಗ್ರಹ ಹಾಗೂ ಶುದ್ಧೀಕರಣ ಯೋಜನೆಯ ಕಾರ್ಯಕ್ರಮವು ಶುಕ್ರವಾರ ಮಧ್ಯಾಹ್ನ 12.37ರಿಂದ 12.47ರ ವರೆಗೆ ಚಾವುಂಡರಾಯ ಸಭಾ ಮಂಟಪದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT