ADVERTISEMENT

ಉಡುಪಿ ಕೃಷ್ಣನಿಗೆ ಒಂದು ಗ್ರಾಂ ಚಿನ್ನದ ತುಳಸಿ ನೀಡಿ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 20:10 IST
Last Updated 2 ಫೆಬ್ರುವರಿ 2018, 20:10 IST
ವಿದ್ಯಾಧೀಶ ಸ್ವಾಮೀಜಿ
ವಿದ್ಯಾಧೀಶ ಸ್ವಾಮೀಜಿ   

ಉಡುಪಿ: ‘ಉಡುಪಿ ಕೃಷ್ಣನಿಗೆ ಸ್ವರ್ಣ ಗರ್ಭಗುಡಿ ನಿರ್ಮಿಸುವುದು ನನ್ನ ಸಂಕಲ್ಪ. ಈಗಾಗಲೇ ಲಕ್ಷ ತುಳಸಿ ಅರ್ಚನೆ ಶ್ರೀಕೃಷ್ಣನಿಗೆ ನಡೆಯುತ್ತಿದೆ. ಒಂದು ಲಕ್ಷ ಭಕ್ತರು ಒಂದು ಗ್ರಾಂನಷ್ಟು ಸ್ವರ್ಣ ತುಳಸಿ ಅರ್ಪಿಸಿದರೆ ನನ್ನ ಸಂಕಲ್ಪ ಸುಲಭವಾಗಿ ಈಡೇರುತ್ತದೆ’ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

‘ಸ್ವರ್ಣ ಗರ್ಭಗುಡಿಗೆ 100 ಕೆ.ಜಿ. ಚಿನ್ನ ಬೇಕು. ಭಕ್ತರು ಭಕ್ತಿಪೂರ್ವಕವಾಗಿ ಒಂದು ಗ್ರಾಂ ಸ್ವರ್ಣ ತುಳಿಸಿ ಅರ್ಪಿಸಿದ್ದೇ ಆದರೆ ಅದನ್ನು ಶ್ರೀ ಕೃಷ್ಣನ ಸ್ವರ್ಣ ಗರ್ಭಗುಡಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ಈಗಾಗಲೇ ನೀಲ ನಕ್ಷೆ ಸಿದ್ಧವಾಗಿದೆ. ಮರದ ಹಾಗೂ ತಾಮ್ರದ ಹೊದಿಕೆ ಮೊದಲಿಗೆ ಮಾಡಲಾಗುತ್ತದೆ’ ಎಂದು ಅವರು ಶುಕ್ರವಾರ ಪತ್ರಕರ್ತರಿಗೆ ತಿಳಿಸಿದರು.

ಮಠದ ವತಿಯಿಂದ 150 ಶಾಲೆಗಳಿಗೆ ಬಿಸಿಯೂಟ ನೀಡುವ ವ್ಯವಸ್ಥೆ ನಡೆಯುತ್ತಿದೆ. ಉಡುಪಿ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.