ADVERTISEMENT

9 ಮಕ್ಕಳ ದತ್ತು ಪಡೆದ ಸುಧಾಕರ್ ನೇತೃತ್ವದ ಸಾಯಿಕೃಷ್ಣ ಟ್ರಸ್ಟ್

ಕೋವಿಡ್‌ನಿಂದ ಅನಾಥ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 20:48 IST
Last Updated 27 ಜೂನ್ 2021, 20:48 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಚಿಕ್ಕಬಳ್ಳಾಪುರ: ಕೋವಿಡ್‌ನಿಂದ ತಂದೆ ಮತ್ತು ತಾಯಿಯನ್ನು ಕಳೆದುಕೊಂಡು ಅನಾಥರಾದ ಜಿಲ್ಲೆಯ 9 ಮಕ್ಕಳನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ನೇತೃತ್ವದ ಸಾಯಿಕೃಷ್ಣ ಟ್ರಸ್ಟ್ ದತ್ತು ಪಡೆದಿದೆ. ಪ್ರತಿ ಮಕ್ಕಳ ಹೆಸರಿನಲ್ಲಿ ₹ 1 ಲಕ್ಷ ಠೇವಣಿ ಸಹ ಇರಿಸಲಾಗಿದೆ.

ಭಾನುವಾರ ಇಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಠೇವಣಿಯ ಬಾಂಡ್‌ಗಳನ್ನು ಮಕ್ಕಳಿಗೆ ನೀಡಿ ಮಾತನಾಡಿದ ಸುಧಾಕರ್, ‘ಕೋವಿಡ್‌ನಿಂದ ಬಹಳಷ್ಟು ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅವರ ನೆರವಿಗೆ ನಿಲ್ಲಬೇಕಾದುದು ನಮ್ಮ ಕರ್ತವ್ಯ. ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡ ಜಿಲ್ಲೆಯ ಮಕ್ಕಳನ್ನು ದತ್ತು ಪಡೆಯುವೆ’ ಎಂದರು.

‘ನಮ್ಮ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಮೂಲಕ ಶೈಕ್ಷಣಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಲಾಗುವುದು. ಈಗ ಮಕ್ಕಳ ಹೆಸರಿನಲ್ಲಿ ವೈಯಕ್ತಿಕವಾಗಿ ಠೇವಣಿ ಇಟ್ಟಿದ್ದೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.