ADVERTISEMENT

ಗಂಟಲಲ್ಲಿ ಬಲೂನ್ ಸಿಲುಕಿ 13 ವರ್ಷದ ಬಾಲಕ ಸಾವು! ಹಳಿಯಾಳದ ಜೋಗನಕೊಪ್ಪದಲ್ಲಿ ಘಟನೆ

'ಬಾಲಕ ಬಲೂನ್ ಊದುವ ವೇಳೆ ಗಂಟಲಿಗೆ ಸಿಲುಕಿ, ಉಸಿರುಗಟ್ಟಿತ್ತು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 9:48 IST
Last Updated 2 ಡಿಸೆಂಬರ್ 2024, 9:48 IST
<div class="paragraphs"><p>ನವೀನ್ ನಾರಾಯಣ ಬೆಳಗಾಂವಕರ (13) ಮೃತ ಬಾಲಕ</p></div>

ನವೀನ್ ನಾರಾಯಣ ಬೆಳಗಾಂವಕರ (13) ಮೃತ ಬಾಲಕ

   

ಹಳಿಯಾಳ, ಉತ್ತರ ಕನ್ನಡ ಜಿಲ್ಲೆ: ಹಳಿಯಾಳ ತಾಲ್ಲೂಕಿನ ಜೋಗನಕೊಪ್ಪ ಗ್ರಾಮದ ಬಾಲಕನೊಬ್ಬ ಗಂಟಲಲ್ಲಿ ಬಲೂನ್ ಸಿಲುಕಿ ಭಾನುವಾರ ರಾತ್ರಿ ಮೃತಪಟ್ಟಿದ್ದಾನೆ.

ನವೀನ್ ನಾರಾಯಣ ಬೆಳಗಾಂವಕರ (13) ಮೃತ ಬಾಲಕ.

ADVERTISEMENT

'ಬಾಲಕ ಬಲೂನ್ ಊದುವ ವೇಳೆ ಗಂಟಲಿಗೆ ಸಿಲುಕಿ, ಉಸಿರುಗಟ್ಟಿತ್ತು. ಕೂಡಲೆ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದೆವು. ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು' ಎಂದು ಮೃತನ ಕುಟುಂಬ ಸದಸ್ಯರೊಬ್ಬರು ತಿಳಿಸಿದ್ದಾರೆ.

ಘಟನೆ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.