ADVERTISEMENT

₹2.44 ಲಕ್ಷ ಕೋಟಿ ಬಜೆಟ್‌ಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 19:45 IST
Last Updated 24 ಮಾರ್ಚ್ 2020, 19:45 IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಡಿಸಿದ 2020–21ನೇ ಸಾಲಿನ ಪೂರ್ಣ ಬಜೆಟ್‌ಗೆ ಪ್ರತಿ ಪಕ್ಷಗಳ ಅನುಪಸ್ಥಿತಿ ನಡುವೆ ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆಯಲಾಗಿದೆ.

ಮುಂದಿನ ವರ್ಷದ ಏಪ್ರಿಲ್‌ವರೆಗೆ ಖರ್ಚು– ವೆಚ್ಚಗಳಿಗಾಗಿ ₹2.44 ಲಕ್ಷ ಕೋಟಿ ನೀಡುವ ಧನ ವಿನಿಯೋಗ ಮಸೂದೆಗೆ ಅಂಗೀಕಾರ ಪಡೆಯಲಾಯಿತು. ಬಜೆಟ್‌ ಮಂಡಿಸಿದಾಗ ಬಜೆಟ್‌ ಗಾತ್ರ ₹2.37 ಲಕ್ಷ ಕೋಟಿ ಇತ್ತು. ಸುಮಾರು ₹ 7 ಲಕ್ಷದಷ್ಟು ಹೆಚ್ಚಳ ಮಾಡ
ಲಾಗಿದೆ. ನೀರಾವರಿ ಮತ್ತು ಮಠ– ಮಂದಿರಗಳಿಗೆ ಅನುದಾನ ಏರಿಕೆ ಸಾಧ್ಯತೆ ಇದೆ ಎನ್ನಲಾಗಿದೆ.

ಏಪ್ರಿಲ್‌ ನಿಂದ ಜುಲೈ ವರೆಗಿನ ವೆಚ್ಚಕ್ಕಾಗಿ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯಲಾಗುತ್ತಿತ್ತು. ಇದೇ ಮೊದಲ ಸಲಪೂರ್ಣ ಬಜೆಟ್‌ಗೆ ಅನುಮೋದನೆ ಪಡೆಯಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.