ADVERTISEMENT

ಹೊಸಪೇಟೆ, ಕೂಡ್ಲಿಗಿ: ನಾಲ್ಕು ಕಡೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:56 IST
Last Updated 31 ಡಿಸೆಂಬರ್ 2020, 19:56 IST
ಹೊಸಪೇಟೆಯ ಬಸವೇಶ್ವರ ಬಡಾವಣೆಯಲ್ಲಿರುವ ಉಪ ನೋಂದಣಾಧಿಕಾರಿ ಪ್ರಭಾಕರ ಮಠದ ಅವರ ಮನೆಯ ಮೇಲೆ ಗುರುವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು
ಹೊಸಪೇಟೆಯ ಬಸವೇಶ್ವರ ಬಡಾವಣೆಯಲ್ಲಿರುವ ಉಪ ನೋಂದಣಾಧಿಕಾರಿ ಪ್ರಭಾಕರ ಮಠದ ಅವರ ಮನೆಯ ಮೇಲೆ ಗುರುವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು   

ಹೊಸಪೇಟೆ/ಕೂಡ್ಲಿಗಿ: ಹೊಸಪೇಟೆ ಉಪ ನೋಂದಣಾಧಿಕಾರಿ ಪ್ರಭಾಕರ ಮಠದ ಅವರ ಮನೆ, ಕಚೇರಿ, ಕೂಡ್ಲಿಗಿಯಲ್ಲಿರುವ ಅವರ ಸೋದರ ಮಾವನ ಮನೆ ಸೇರಿದಂತೆ ಮೂರು ಕಡೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

ನಗರದ ತಾಲ್ಲೂಕು ಕಚೇರಿಯಲ್ಲಿನ ಉಪ ನೋಂದಣಾಧಿಕಾರಿ ಕಚೇರಿ, ಬಸವೇಶ್ವರ ಬಡಾವಣೆಯಲ್ಲಿನ ಪ್ರಭಾಕರ ಅವರ ಮನೆ ಹಾಗೂ ಕೂಡ್ಲಿಗಿಯಲ್ಲಿನ ಅವರ ಮಾವನ ಮನೆ ಮೇಲೆ ಎಸಿಬಿ ಎಸ್ಪಿ ಗುರುನಾಥ ಬಿ.ಮತ್ತೂರ ನೇತೃತ್ವದ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿವೆ.

ಅಕ್ರಮ ಆಸ್ತಿ ಗಳಿಕೆ ಹಾಗೂ ಆಸ್ತಿ ನೋಂದಣಿಯಲ್ಲಿ ಅಕ್ರಮ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.