ADVERTISEMENT

ವಿದ್ಯುತ್‌ ಪರಿವರ್ತಕ ಬದಲಾವಣೆಯಲ್ಲಿ ಗುರಿ ಸಾಧನೆ: ಸಚಿವ ವಿ. ಸುನೀಲ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 17:54 IST
Last Updated 1 ಜನವರಿ 2022, 17:54 IST
ಸುನೀಲ್‌ ಕುಮಾರ್‌
ಸುನೀಲ್‌ ಕುಮಾರ್‌   

ಬೆಂಗಳೂರು: ತಾವು ಇಂಧನ ಇಲಾಖೆಯ ಜವಾಬ್ದಾರಿ ವಹಿಸಿ ಕೊಂಡ ಬಳಿಕ ಕೃಷಿ ನೀರಾವರಿ ಪಂಪ್‌ ಸೆಟ್‌ಗಳ 27,637 ವಿದ್ಯುತ್‌ ಪರಿವರ್ತಕಗಳನ್ನು ಬದಲಾ ವಣೆ ಮಾಡಿದ್ದು, ರೈತರಿಗೆ ತ್ವರಿತ ಸೇವೆ ನೀಡುವ ಭರವಸೆಯ ಗುರಿ ಸಾಧಿಸಲಾಗಿದೆ ಎಂದು ಇಂಧನ ಸಚಿವ ವಿ. ಸುನೀಲ್‌ಕುಮಾರ್‌ ತಿಳಿಸಿದ್ದಾರೆ.

‘ವಿಫಲಗೊಂಡ ವಿದ್ಯುತ್‌ ಪರಿವರ್ತಕಗಳನ್ನು 24 ಗಂಟೆಗಳೊಳಗೆ ಬದಲಾವಣೆ ಮಾಡುವ ಭರವಸೆ ನೀಡಿದ್ದೆ. ನಾನು ಸಚಿವನಾದ ಬಳಿಕ ವಿದ್ಯುತ್‌ ಪರಿವರ್ತಕಗಳ ಬದಲಾವಣೆ ಕೋರಿ 27,650 ಕೋರಿಕೆಗಳು ಬಂದಿವೆ. ಅವುಗಳಲ್ಲಿ 27,637
ಪರಿವರ್ತಕಗಳ ಬದಲಾವಣೆ ಮಾಡ ಲಾಗಿದೆ. ಈ ಪೈಕಿ 21,145 ಪರಿವರ್ತಕಗಳನ್ನು ದೂರು ಸ್ವೀಕರಿಸಿದ 24 ಗಂಟೆಗಳೊಳಗೆ ಬದಲಾವಣೆ ಮಾಡಲಾಗಿದೆ. 6,492 ಪರಿವರ್ತಕಗಳನ್ನು 24 ಗಂಟೆಗಳ ನಂತರದ ಕೆಲವೇ ಗಂಟೆಗಳೊಳಗೆ ಬದಲಾಯಿಸಲಾಗಿದೆ’ ಎಂದು ಹೇಳಿದ್ದಾರೆ.

ಹಿಂದೆ ವಿದ್ಯುತ್‌ ಪರಿವರ್ತಕಗಳನ್ನು ಬದಲಾವಣೆ ಮಾಡಿಸಲು ರೈತರು ವರ್ಷಾನುಗಟ್ಟಲೆ ಅಲೆದಾಡಬೇಕಿದ್ದ ಪರಿಸ್ಥಿತಿ ಇತ್ತು. ಅದಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿ, ವಿದ್ಯುತ್‌ ಪರಿವರ್ತಕಗಳ ಬ್ಯಾಂಕ್‌ ಸ್ಥಾಪಿಸಲಾಗಿದೆ. ಬಳಿಕ ರೈತರಿಗೆ ತ್ವರಿತ ಸೇವೆ ಲಭಿಸುತ್ತಿದೆ. ರಸ್ತೆ ಸಂಪರ್ಕ ಸೇರಿದಂತೆ ಇತರ ಸಮಸ್ಯೆಗಳ ಕಾರಣದಿಂದ ಕೆಲವು ಪ್ರಕರಣಗಳಲ್ಲಿ ತುಸು ತಡವಾಗಿದೆ. ಬಹುತೇಕ ಶೇಕಡ 100ರಷ್ಟು ಸಾಧನೆ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.