ADVERTISEMENT

ನಿಷೇಧಾಜ್ಞೆ ನಡುವೆಯೇ ಜಾಲಿರೈಡ್: ಅಪಘಾತದಲ್ಲಿ ನಟಿ ಶರ್ಮಿಳಾ ಮಾಂಡ್ರೆಗೆ ಗಾಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 9:10 IST
Last Updated 4 ಏಪ್ರಿಲ್ 2020, 9:10 IST
ನಟಿ ಶರ್ಮಿಳಾ ಮಾಂಡ್ರೆ– ಚಿತ್ರ ಕೃಪೆ: ಫೇಸ್‌ಬುಕ್‌
ನಟಿ ಶರ್ಮಿಳಾ ಮಾಂಡ್ರೆ– ಚಿತ್ರ ಕೃಪೆ: ಫೇಸ್‌ಬುಕ್‌    
""
""
""

ಬೆಂಗಳೂರು: ಖಾಲಿ ರಸ್ತೆಯಲ್ಲಿ ಜಾಲಿರೈಡ್ ಮಾಡುತ್ತಿದ್ದ ನಟಿ ಶರ್ಮಿಳಾ ಮಾಡ್ರೆ ಕಾರು ಅಪಘಾತವಾಗಿದ್ದು, ಶರ್ಮಿಳಾ ಅವರೂ ಗಾಯಗೊಂಡಿದ್ದಾರೆ.

ನಗರದಲ್ಲಿ ನಿಷೇಧಾಜ್ಞೆ ಇದೆ. ಇದರ ನಡುವೆಯೇ ಶರ್ಮಿಳಾ ಸ್ನೇಹಿತರ ಜೊತೆ ಜಾಗ್ವಾರ್ ಕಾರಿನಲ್ಲಿ ಶುಕ್ರವಾರ ರಾತ್ರಿ ಸುತ್ತಾಡುತ್ತಿದ್ದರು.

ವಸಂತನಗರ ಕೆಳ ಸೇತುವೆಯಲ್ಲಿ ಕಾರು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಫಘಾತದಲ್ಲಿ ಶರ್ಮಿಳಾ ಮಂಡ್ರೆ ಮುಖಕ್ಕೆ ಗಾಯವಾಗಿದ್ದು, ಸ್ನೇಹಿತನೊಬ್ಬನ ಕೈಗೆ ಪೆಟ್ಟು ಬಿದ್ದಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT
ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಜಾಗ್ವಾರ್‌ ಕಾರು

ಶರ್ಮಿಳಾ ಮಾಂಡ್ರೆ ಹಾಗೂ ಸ್ನೇಹಿತನ ವಿರುದ್ಧ ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪಾಸ್ ಇಲ್ಲದೆ ನಗರದಲ್ಲಿ ಯಾವುದೇ ವಾಹನ ಸಂಚರಿಸಬಾರದೆಂದು ಕಮಿಷನರ್ ಹೇಳಿದ್ದರು. ಆದರೆ, ಶರ್ಮಿಳಾ ನಿಯಮ ಉಲ್ಲಂಘಿಸಿ ಕಾರು ರಸ್ತೆಗೆ ತಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.