ವಿಧಾನಸೌಧ
ಬೆಂಗಳೂರು: ಶಿಕ್ಷಣ ಹಾಗೂ ಸಂಶೋಧನೆಯ ಸಹಭಾಗಿತ್ವ ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮತ್ತು ಲಿವರ್ ಪೂಲ್ ವಿಶ್ವವಿದ್ಯಾಲಯ ಒಪ್ಪಂದ ಮಾಡಿಕೊಂಡಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರಿ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು.
ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್‌ನ ಬ್ರಿಟಿಷ್ ಕೌನ್ಸಿಲ್ ವಿಭಾಗದ ನಿರ್ದೇಶಕ ಜನಕ ಪುಷ್ಪನಾಥನ್, ಉಪ ಮುಖ್ಯಸ್ಥ ಜೇಮ್ಸ್ ಗೋಡ್ಬರ್, ಲಿವರ್ ಪೂಲ್ ವಿ.ವಿ.ಯ ಕುಲಪತಿ ಪ್ರೊ.ಟಿಮ್ ಜೋನ್ಸ್, ಮತ್ತು ಸಮ-ಕುಲಪತಿ ಪ್ರೊ.ತಾರಿಕ್ ಅಲಿ ಅವರು ಸಹಿ ಹಾಕಿದರು.
ಆವಿಷ್ಕಾರ ಕಾರ್ಯಕ್ರಮಗಳು ಹಾಗೂ ಶಿಕ್ಷಣ ಸಹಕಾರಕ್ಕೆ ಸಂಬಂಧಿಸಿದ ಸಹಭಾಗಿತ್ವವನ್ನು ಸದೃಢಗೊಳಿಸಲಾಗುತ್ತದೆ. ಅದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಜಂಟಿ ಕಾರ್ಯತಂಡ ರಚಿಸುವ ಗುರಿಯನ್ನೂ ಒಪ್ಪಂದ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.