ADVERTISEMENT

ವಿಮಾನ ನಿಲ್ದಾಣದ ಲಾಂಜ್‌ ನವೀಕರಣ

ಪ್ರಯಾಣಿಕರಿಗೆ ಶೀಘ್ರ ಅತ್ಯಾಧುನಿಕ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 28 ಮೇ 2019, 20:06 IST
Last Updated 28 ಮೇ 2019, 20:06 IST

ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿ (ಲಾಂಜ್) ಹಾಗೂ ಪ್ರಯಾಣಿಕರ ಹೋಟೆಲ್‌ಗಳ ನವೀಕರಣ ಆರಂಭವಾಗಲಿದ್ದು,ಜೂ.1ರಿಂದ ಲಾಂಜ್‌ಗಳು ಹಾಗೂ ಹೋಟೆಲ್‌ಗಳನ್ನು ‌ಭಾಗಶಃ ಮುಚ್ಚಲಾಗುತ್ತದೆ.

ಸದ್ಯ ವಿಮಾನ ನಿಲ್ದಾಣದಲ್ಲಿನಾಲ್ಕು ಲಾಂಜ್‍ಗಳಿವೆ. ಇವುಗಳಲ್ಲಿ ತಲಾ ಎರಡು ಅಂತಾರಾಷ್ಟ್ರೀಯ ಭದ್ರತೆ ವ್ಯಾಪ್ತಿಗೆ ಹಾಗೂ ಸ್ವದೇಶಿ ಭದ್ರತಾ ವ್ಯಾಪ್ತಿಗೆ ಒಳಪಟ್ಟಿವೆ. ಲಾಂಜ್ ಹಾಗೂ ಹೋಟೆಲ್‌ಗಳ ನವೀಕರಣವನ್ನು ಎರಡು ಹಂತದಲ್ಲಿ 18ರಿಂದ 20 ತಿಂಗಳಲ್ಲಿ ಮಾಡಲಾಗುತ್ತದೆ. ಗೇಟ್ ಸಮೂಹ ಹಾಗೂಟ್ರಾವೆಲ್ ಆ್ಯಂಡ್ ಫುಡ್ ಸರ್ವೀಸ್ (ಟಿಎಫ್‍ಎಸ್) ನವೀಕರಣ ಯೋಜನೆ ಕೈಗೆತ್ತಿಕೊಂಡಿದೆ.

‘ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿನ ಪ್ರಯಾಣ ಅನುಭವವನ್ನು ವಿಸ್ತರಿಸುವ ಉದ್ದೇಶದೊಂದಿಗೆ ಲಾಂಜ್ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಲಾಂಜ್‌ಗಳನ್ನು ಆಕರ್ಷಣೆಯ ತಾಣಗಳನ್ನಾಗಿ ಮಾಡಲಾಗುತ್ತದೆ. ಅತ್ಯುತ್ತಮ ಆತಿಥ್ಯ ಹಾಗೂ ಶ್ರೇಷ್ಠ ಗ್ರಾಹಕ ಸೇವೆ ಒದಗಿಸಲಾಗುತ್ತದೆ’ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ವಾಣಿಜ್ಯ ಅಧಿಕಾರಿ ಕೆನೆತ್ ಆರ್. ತಿಳಿಸಿದ್ದಾರೆ.

ADVERTISEMENT

ನವೀಕರಣ ಕಾರ್ಯಗಳು ಪೂರ್ಣಗೊಂಡ ಬಳಿಕ ಪ್ರಯಾಣಿಕರಿಗೆ ಹೆಚ್ಚುವರಿ ಸೇವೆಗಳು ದೊರೆಯಲಿವೆ. ಇದಕ್ಕಾಗಿ ಲೈವ್ ಕುಕ್ಕಿಂಗ್, ಗಣ್ಯ ಶೆಫ್‍ಗಳಿಂದ ಆಯ್ದ ಆಹಾರ ಪದಾರ್ಥಗಳ ಪಟ್ಟಿ, ಗ್ರಂಥಾಲಯ, ಬ್ಯಾರಿಸ್ಟಾ ಬಾರ್ ಮತ್ತು ವೈನ್ ಸೆಲ್ಲರ್ ಸೇರಿದಂತೆ ಹಲವು ಸೌಲಭ್ಯಗಳು ಇರಲಿವೆ.ಪ್ರಯಾಣಿಕರು ಶವರ್ ಸೌಲಭ್ಯವನ್ನು ಬಳಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.