ADVERTISEMENT

ಅಕ್ಷಯ ತೃತೀಯ| ಚಿನ್ನ ಖರೀದಿಸುವವರಿಗೆ ಬೆಲೆ ಏರಿಕೆ ಬಿಸಿ; BJP ವಿರುದ್ಧ ‘ಕೈ’ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2025, 10:35 IST
Last Updated 30 ಏಪ್ರಿಲ್ 2025, 10:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಬೆಂಗಳೂರು: ಅಕ್ಷಯ ತೃತೀಯ ಹಬ್ಬದಂದು ಚಿನ್ನದ ಖರೀದಿ ಮಾಡುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಾಂಗ್ರೆಸ್‌, 10 ಗ್ರಾಂ ಚಿನ್ನಕ್ಕೆ ಇದೀಗ ₹1 ಲಕ್ಷ. ಕೇವಲ 10 ವರ್ಷಗಳಲ್ಲಿ ₹10ದಿಂದ ₹1 ಲಕ್ಷಕ್ಕೆ ಏರಿಕೆ ಮಾಡುವುದರ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಆಭರಣ ಪ್ರಿಯರಿಗೆ ಭಾರಿ ಶಾಕ್‌ ಆಗಿದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ADVERTISEMENT

ಕೇವಲ 11 ವರ್ಷಗಳಲ್ಲಿ ಶೇ 250 ಪಟ್ಟು ಹೆಚ್ಚಾದ ಹಳದಿ ಲೋಹದ ಮೌಲ್ಯ. ದುರ್ಬಲ ಸರ್ಕಾರದ ನಡೆಯಿಂದಾಗಿ ಬಡ, ಮಾಧ್ಯಮ ಮತ್ತು ಶ್ರಮಿಕ ವರ್ಗ ಕಂಗಾಲಾಗಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

3 ತಿಂಗಳ 'ಗೃಹ ಲಕ್ಷ್ಮಿ' ಹಣ ಮೇ ತಿಂಗಳಲ್ಲಿ ಬಿಡುಗಡೆ; ಲಕ್ಷಿ ಹೆಬ್ಬಾಳ್ಕರ್

ಜನವರಿ, ಫೆಬ್ರವರಿ, ಮಾರ್ಚ್ ಮೂರು ತಿಂಗಳ 'ಗೃಹ ಲಕ್ಷ್ಮಿ' ಬಾಕಿ ಹಣವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು. ಮೂರು ತಿಂಗಳ ಹಣ ಬಿಡುಗಡೆಗೆ ಹಣಕಾಸು ಇಲಾಖೆಯ ಅನುಮೋದನೆ ಸಿಕ್ಕಿದೆ. ಒಂದು ವಾರ ಒಂದು ತಿಂಗಳ ಹಣ, ಮತ್ತೊಂದು ವಾರ ಮತ್ತೊಂದು ತಿಂಗಳ ಹಣವನ್ನು ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.