ಬೆಂಗಳೂರು: ನಟ ಅಂಬರೀಷ್ ಅವರ ಅಸ್ಥಿ ಸಂಚಯನ ಕಾರ್ಯದ ಪೂಜಾ ವಿಧಿ ವಿಧಾನಗಳನ್ನು ಬುಧವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಕುಟುಂಬಸ್ಥರು ನೆರವೇರಿಸಿದರು.
ಅಂಬರೀಷ್ ಸಮಾಧಿಗೆ ಹಾಲು–ತುಪ್ಪ ಬಿಡುವ ಕಾರ್ಯವು ಇದೇ ವೇಳೆ ನಡೆಯಿತು. ಒಕ್ಕಲಿಗ ಸಂಪ್ರದಾಯದಂತೆ ಅಸ್ಥಿ ಸಂಚಯನ ಹಾಗೂ ಹಾಲು ತುಪ್ಪ ಬಿಡುವ ಕಾರ್ಯವನ್ನು ನೆರವೆರಿಸಲಾಯಿತು.
ಹಿರಿಯ ಜೋತಿಷಿ ಬಾನುಪ್ರಕಾಶ್ ಶರ್ಮಾ ಮಾರ್ಗದರ್ಶನದಲ್ಲಿ ಅಂಬರೀಷ್ ಅವರ ಪುತ್ರ ಅಭಿಷೇಕ್ ಗೌಡ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಈ ವೇಳೆ ಸುಮಲತಾ ಉಪಸ್ಥಿತರಿದ್ದರು.
ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅಭಿಷೇಕ್ ಗೌಡ ಮತ್ತು ಸುಮಲತಾ ಅಸ್ಥಿ ಸಂಚಯದ ಪೂಜಾ ಕಾರ್ಯಗಳನ್ನು ಪೂರೈಸಿದರು. 11.30ರ ಸುಮಾರಿಗೆ ಕುಟುಂಬಸ್ಥರು ಅಸ್ಥಿಯನ್ನು ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಸಲು ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.