ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿಯು ನಂದಿನಿ ಪಶು ಆಹಾರದ ದರವನ್ನು ಪ್ರತಿ ಟನ್‌ಗೆ ₹ 500 ಇಳಿಕೆ ಮಾಡಿದೆ.
ಕೋವಿಡ್ ಹಾಗೂ ಅತಿವೃಷ್ಟಿ ಕಾರಣ ಕಳೆದ ಫೆಬ್ರವರಿಯಿಂದ ಮೇ ತಿಂಗಳವರೆಗೂ ಪ್ರತಿ ಟನ್ ನಂದಿನಿ ಪಶು ಆಹಾರದ ಮೇಲೆ ₹ 500 ರಿಯಾಯಿತಿಯನ್ನು ಮಂಡಳಿ ನೀಡಿತ್ತು. ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು ₹ 10 ಕೋಟಿ ಮೊತ್ತದಷ್ಟು ರಿಯಾಯಿತಿ ಭರಿಸಲಾಗಿದೆ. ಪರಿಸ್ಥಿತಿ ಸುಧಾರಿಸದ ಕಾರಣ ಮಂಡಳಿಯು ನ.5ರಿಂದ ಅನ್ವಯವಾಗುವಂತೆ ಪ್ರತಿ ಟನ್‌ಗೆ ₹ 500 ಇಳಿಕೆ ಮಾಡಿದೆ.
ಈ ಕೊಡುಗೆ ಎರಡು ತಿಂಗಳು ಇರಲಿದೆ. ರಾಜ್ಯದ ಎಲ್ಲ ಹೈನುಗಾರರು ಬೆಲೆ ಇಳಿಕೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಂಡಳಿಯ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.