ADVERTISEMENT

ಸಭಾಧ್ಯಕ್ಷರ ನೇಮಕ ಪಕ್ಷಾತೀತವಾಗಿ ಆಗಲಿ: ನಾಗಮೋಹನ್‌ ದಾಸ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:45 IST
Last Updated 19 ಜುಲೈ 2019, 19:45 IST
ನಾಗಮೋಹನದಾಸ್
ನಾಗಮೋಹನದಾಸ್   

ದಾವಣಗೆರೆ: ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸಭಾಧ್ಯಕ್ಷರನ್ನು ಪಕ್ಷಾತೀತವಾಗಿ ನೇಮಕ ಮಾಡುವ ಅಗತ್ಯ ಇದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ‘ಸಂವಿಧಾನ ಓದು’ ಕಾರ್ಯಾಗಾರದ ಸಂವಾದದಲ್ಲಿ ಅವರು ಪ್ರೇಕ್ಷಕರೊಬ್ಬರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ಸಭಾಧ್ಯಕ್ಷರೂ ಸೇರಿ ಕೆಲ ಸಾಂವಿಧಾನಿಕ ಹುದ್ದೆಗಳಿಗೆ ಪಕ್ಷಾತೀತವಾಗಿ ಆಯ್ಕೆಯಾದರೆ ತಮ್ಮ ಪಕ್ಷದ ಪರ ಒಲವು ತೋರುವುದಕ್ಕೆ ಕಡಿವಾಣ ಹಾಕಬಹುದಲ್ಲವೇ’ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ADVERTISEMENT

‘ಇಂತಹ ನೀತಿ ಜಾರಿಗೆ ಡಡಬಂದರೆ ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆ ಬರುವುದು ಸಾಧ್ಯವಾಗಲಿದೆ’ ಎಂದು ಅವರು ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಸಹಮತ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.