ADVERTISEMENT

ಹಿಂದೂ ದೇಗುಲಗಳು ಮಾತ್ರ ಕಾಣುತ್ತವೆಯೇ: ಪ್ರತಾಪಸಿಂಹ

ಒತ್ತುವರಿ ತೆರವು: ಡಿ.ಸಿ ಗಾದಿ ಗೌತಮ್‌ಗೆ ಸಂಸದ ಪ್ರತಾಪಸಿಂಹ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 21:56 IST
Last Updated 8 ಸೆಪ್ಟೆಂಬರ್ 2021, 21:56 IST
ಪ್ರತಾಪಸಿಂಹ
ಪ್ರತಾಪಸಿಂಹ   

ಮೈಸೂರು: ‘ಮೊದಲು ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ ತೆರವುಗೊಳಿಸಿ, ನಂತರ ಹಿಂದೂ ದೇವಾಲಯಗಳನ್ನು ಮುಟ್ಟಿ’ ಎಂದು ಸಂಸದ ಪ್ರತಾಪಸಿಂಹ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು. ‌‌

‘ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಟ್ಟಲಾಗಿರುವ ಹಾಗೂ ಸಂಚಾರಕ್ಕೆ ತೊಂದರೆ ಯಾಗಿರುವ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ದೇವಾಲಯ ಗಳಿಗೆ ಮಾತ್ರ ಸೀಮಿತಗೊಂಡಿದೆ’ ಎಂದು ಬುಧವಾರ ಇಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‌‘ತೆರವು ಕಾರ್ಯಾಚರಣೆಗೆ ಮುನ್ನ ಸಿಬ್ಬಂದಿಯು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಳ್ಳರಂತೆ ಕೆಡವುತ್ತಿದ್ದಾರೆ. ಹುಲ್ಲಹಳ್ಳಿ ಬಳಿಯ ದೇವಾಲಯವನ್ನು ಉರುಳಿಸಲಾಗಿದೆ. ಆದರೆ ಇರ್ವಿನ್‌ ರಸ್ತೆ ವಿಸ್ತರಣೆಗಾಗಿ ಮಸೀದಿ ಗೋಡೆಯನ್ನು ತೆರವು ಗೊಳಿಸಲು ಮಾತ್ರ ಮೀನಮೇಷ ಎಣಿಸುತ್ತಾರೆ’ ಎಂದು ಕಿಡಿಕಾರಿದರು.

ADVERTISEMENT

‘ಕೆಸರೆಯಲ್ಲಿ ಕೆರೆ ಒತ್ತುವರಿ ಮಾಡಿ ಮಸೀದಿ ನಿರ್ಮಾಣಕ್ಕೆ ಸಿದ್ಧತೆ ನಡೆಸ ಲಾಗಿದೆ. ಎನ್‌.ಆರ್‌.ಮೊಹಲ್ಲಾ, ಶಕ್ತಿ ನಗರದಲ್ಲಿ ಅನ ಧಿಕೃತವಾಗಿ ಹತ್ತಾರು ಮಸೀದಿ, ದರ್ಗಾ ತಲೆ ಎತ್ತಿವೆ. ಅವು ಜಿಲ್ಲಾಡ ಳಿತಕ್ಕೆ ಕಾಣುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘2013ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಪಟ್ಟಿಯಂತೆಯೇ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಪ್ರತಿಕ್ರಿಯಿಸಿದರು. ‌

‘ಪಟ್ಟಿಯ ಪ್ರಕಾರ ಎಲ್ಲಾ ಧಾರ್ಮಿಕ ಕಟ್ಟಡಗಳ ತೆರವು ಆಗಲಿ. ಅದಕ್ಕೆ ಧಾರ್ಮಿಕ ಮುಖಂಡರ ಸಭೆ ಕರೆದು ಮನವರಿಕೆ ಮಾಡಿಕೊಡಿ’ ಎಂದು ಪ್ರತಾಪಸಿಂಹ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.