ADVERTISEMENT

ಕೆ. ಸೋಮಶೇಖರ್‌ ಅವರು ಸಿದ್ಧಪಡಿಸಿರುವ ನಾಡದೇವಿ ಚಿತ್ರ ಅಧಿಕೃತ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 16:27 IST
Last Updated 4 ಫೆಬ್ರುವರಿ 2023, 16:27 IST
ಅಧಿಕೃತಗೊಂಡಿರುವ ನಾಡದೇವಿ ಚಿತ್ರ
ಅಧಿಕೃತಗೊಂಡಿರುವ ನಾಡದೇವಿ ಚಿತ್ರ   

ಬೆಂಗಳೂರು: ಚಿತ್ರ ಕಲಾವಿದ ಕೆ. ಸೋಮಶೇಖರ್‌ ಅವರು ಸಿದ್ಧಪಡಿಸಿರುವ ‘ನಾಡದೇವಿ’ಯ ಚಿತ್ರವನ್ನು ಅಧಿಕೃತವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.

ನಾಡದೇವಿ ಚಿತ್ರವನ್ನು ಆಯ್ಕೆ ಮಾಡುವ ಸಂಬಂಧ ಈ ಹಿಂದೆ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಡಿ. ಮಹೇಂದ್ರ ಅಧ್ಯಕ್ಷತೆಯಯಲ್ಲಿ ಸಮಿತಿ ರಚಿಸಲಾಗಿತ್ತು. ರಾಜ್ಯದ ಸಾಂಪ್ರದಾಯಿಕ ಕಲೆ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಿಂಬಿಸುವ, ಸೋಮಶೇಖರ್‌ ಅವರು ರಚಿಸಿದ ‘ನಾಡದೇವಿ’ಯ ಚಿತ್ರವನ್ನು ಅಧಿಕೃತಗೊಳಿಸುವಂತೆ ಸಮಿತಿ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ.

ಅಧಿಕೃತಗೊಳಿಸಿರುವ ನಾಡದೇವಿ ಚಿತ್ರದ ಹಿಂದೆ ಕರ್ನಾಟಕದ ನಕ್ಷೆ ಹಾಗೂ ಬಾವುಟ ಇದೆ. ಕಾಲಿಗೆ ಆಸರೆಯಾಗಿ ಕೆಳಗೆ ತಾವರೆ (ಕಮಲ) ಹೂವು ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.