ADVERTISEMENT

ರಾಜಸ್ಥಾನಕ್ಕೆ ಕರ್ತವ್ಯ ನಿಮಿತ್ತ ತೆರಳಿದ್ದ ಎಎಸ್ಐ ಹೃದಯಾಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 4:07 IST
Last Updated 20 ಆಗಸ್ಟ್ 2025, 4:07 IST
<div class="paragraphs"><p>ಹಾಲಪ್ಪ</p></div>

ಹಾಲಪ್ಪ

   

ಹೊಸಪೇಟೆ (ವಿಜಯನಗರ): ಇಲ್ಲಿನ ಗ್ರಾಮೀಣ ಠಾಣೆಯ ಎಎಸ್ಐ ಹಾಲಪ್ಪ (56) ಅವರು ರಾಜಸ್ಥಾನದ ಜೋಧಪುರದಲ್ಲಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ಪ್ರಕರಣವೊಂದರಲ್ಲಿ  ಬಂಧನ ವಾರಂಟ್‌ನೊಂದಿಗೆ ಹಾಲಪ್ಪ ಅವರು ಹೆಡ್‌ಕಾನ್‌ಸ್ಟೆಬಲ್‌ ಮತ್ತು ಕಾನ್‌ಸ್ಟೆಬಲ್‌ ಜತೆಯಲ್ಲಿ ಇದೇ 17ರಂದು ರಾಜಸ್ಥಾನಕ್ಕೆ ತರಳಿದ್ದರು. ಜೋಧಪುರದಲ್ಲಿ ಅವರಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಹೂವಿನಹಡಗಲಿ ತಾಲ್ಲೂಕು ಹಿರೇಹಡಗಲಿಯವರಾದ ಹಾಲಪ್ಪ ಅವರು 1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಅವರ ಮೃತದೇಹವನ್ನು ಗುರುವಾರ ಇಲ್ಲಿಗೆ ತರುವ ನಿರೀಕ್ಷೆ ಇದ್ದು, ಸ್ವಗ್ರಾಮ ಹಿರೇಹಡಗಲಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.