ADVERTISEMENT

ಗುಂಡುಹಾರಿಸಿ ಸಾಮ್ರಾಟ್ ಜ್ಯುವೆಲ್ಸ್ ದರೋಡೆ ಯತ್ನಿಸಿದ್ದ ನಾಲ್ವರ ಸೆರೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 6:24 IST
Last Updated 22 ಆಗಸ್ಟ್ 2019, 6:24 IST
   

ಬೆಂಗಳೂರು: ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿರುವ ಸಾಮ್ರಾಟ್ ಜ್ಯುವೆಲ್ಸ್‌ನ ಸಿಬ್ಬಂದಿಮೇಲೆಗುಂಡುಹಾರಿಸಿ ದರೋಡೆಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರದ ಬಾಲಾಜಿ ರಮೇಶ ಗಾಯಕವಾಡ (25), ಹರಿಯಾಣದ ಬಲವಾನ್ ಸಿಂಗ್ (24), ರಾಜಸ್ಥಾನದವರಾದ ಶ್ರೀರಾಮ ಬಿಸ್ನೋಯಿ (23) ಮತ್ತು ಓಂಪ್ರಕಾಶ್ (27) ಬಂಧಿತರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಆರೋಪಿಗಳನ್ನು ವಿನಾಯಕ ನಗರದ ಡಿವಿಜಿ ಬಡಾವಣೆಯಿಂದ ಬಂಧಿಸಲಾಗಿದೆ. ಬಂಧಿತರಿಂದ ನಾಡಪಿಸ್ತೂಲ್ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದರು.

ADVERTISEMENT

ಬುಧವಾರ ರಾತ್ರಿಯೇ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅವರು ವಿವರಿಸಿದರು.

ಬುಧವಾರ ಮಧ್ಯಾಹ್ನ 2.40ರ ಸುಮಾರಿಗೆ ಚಿನ್ನ ಖರೀದಿ ನೆಪದಲ್ಲಿ ಮೂವರು ದರೋಡೆಕೋರರು ಚಿನ್ನದ ಮಳಿಗೆಗೆ ಬಂದಿದ್ದರು.

ಸರ ಕೇಳಿದ ಆರೋಪಿಗಳು ಬಳಿಕ ಗುಂಡು ಹಾರಿಸಿ ಬೆದರಿಸಿದ್ದರು. ಕೂಡಲೇ ಮಾಲೀಕರ ಪತ್ನಿ ರಾಖಿ ಎಂಬುವವರು ಕುರ್ಚಿ ತೆಗೆದು ಎಸೆದು ಕೂಗಿದ್ದರು. ಆಗ ದರೋಡೆಕೋರರು ಮಿಸ್ ಫೈರ್ ಮಾಡಿ ಪರಾರಿಯಾಗಿದ್ದರು.

ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.