ತರೀಕೆರೆ, ಅಜ್ಜಂಪುರ, ಶಿವನಿ, ಕಡೂರು, ಬೀರೂರು, ಹೊಸದುರ್ಗ ಭಾಗದ ಹಲವು ಹಳ್ಳಿಗಳ ಜನ ಜಾತ್ರೆಗೆ ಎತ್ತಿನ ಬಂಡಿಯಲ್ಲೇ ಬರುವುದು ಸಂಪ್ರದಾಯ. ಜಾತ್ರೆಗೆ ಬರಲು ತಿಂಗಳ ಹಿಂದಿನಿಂದಲೇ ಸಿದ್ಧತೆ ಆರಂಭಿಸುವ ಭಕ್ತರು, ಎತ್ತುಗಳನ್ನೂ ಖರೀದಿಸಿ ಬಂಡಿ ಕಟ್ಟುತ್ತಾರೆ. ಎತ್ತುಗಳಿಗೆ ಸಿಂಗಾರ ಮಾಡುವ ಜತೆಗೆ ಬಂಡಿಗಳಿಗು ಬಣ್ಣ ಬಳಿದು ಅಲಂಕಾರ ಮಾಡುತ್ತಾರೆ. ಎತ್ತಿನ ಗಾಡಿಗಳು ಸಾಲುಗಟ್ಟಿ ರಸ್ತೆಯಲ್ಲಿ ಸಾಗುವುದನ್ನು ನೋಡಲು ಜನ ಸೇರುವುದು ಈ ಜಾತ್ರೆಯ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.