ADVERTISEMENT

ಜನೌಷಧಿ ಕೇಂದ್ರಗಳಲ್ಲಿ ಶೀಘ್ರವೇ ಆಯುರ್ವೇದ ಔಷಧಿ: ಡಿ.ವಿ.ಸದಾನಂದಗೌಡ

ಹುಬ್ಬಳ್ಳಿಯ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪ್ರಾಂತೀಯ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 19:31 IST
Last Updated 6 ನವೆಂಬರ್ 2020, 19:31 IST
ಜನೌಷಧಿ ಕೇಂದ್ರ
ಜನೌಷಧಿ ಕೇಂದ್ರ   

ಬೆಂಗಳೂರು: ಜನೌಷಧಿ ಕೇಂದ್ರಗಳಲ್ಲಿ ಶೀಘ್ರವೇ ಕಡಿಮೆ ದರದಲ್ಲಿ ಆಯು ರ್ವೇದಿಕ್‌ ಔಷಧಿ ಮಾರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

‘ಈ ಕೇಂದ್ರಗಳಲ್ಲಿ ಜನೌಷಧಿಯನ್ನು ಹೊರತುಪಡಿಸಿ, ಬ್ರಾಂಡೆಡ್‌ ಔಷಧದ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಅವರು ಬೆಂಗಳೂರಿನಲ್ಲಿ ನಡೆದ ಆನ್‌ಲೈನ್ ಕಾರ್ಯಕ್ರಮದ ಮೂಲಕ ಹುಬ್ಬಳ್ಳಿಯ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪ್ರಾಂತೀಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದ್ದು, ಜನೌಷಧಿ ಮೂಲಕ ಜನರಿಗೆ ಶೇ 10 ರಿಂದ ಶೇ 90ರವರೆಗೆ ರಿಯಾಯ್ತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದರು.

ADVERTISEMENT

‘ಜನರಿಕ್‌ ಮೆಡಿಸಿನ್ ಆ್ಯಪ್‌ ಮೂಲಕ ಸಾರ್ವಜನಿಕರು ತಮ್ಮ ಮನೆಯ ಸಮೀಪದಲ್ಲಿ ಜನೌಷಧಿ ಮಳಿಗೆ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಅಲ್ಲದೆ, ನಿಮಗೆ ಬೇಕಿರುವ ಔಷಧಿಯ ಹೆಸರನ್ನು ನಮೂದಿಸಿದರೆ, ಆ ಔಷಧಿಯ ಫಾರ್ಮುಲಾ ಹೊಂದಿರುವ ಇತರೆ ಬ್ರಾಂಡ್‌ನ ಯಾವ ಔಷಧಿ ಮಳಿಗೆಯಲ್ಲಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ರಾಜ್ಯದ ವಿವಿಧ ಭಾಗದಲ್ಲಿ ಶೀಘ್ರವೇ 1,000 ಜನೌಷಧಿ ಮಳಿಗೆಗಳನ್ನು ಆರಂಭಿಸುವ ಗುರಿ ಇದೆ’ ಎಂದು ಸದಾನಂದಗೌಡ ಹೇಳಿದರು.

ಬಿಪಿ, ಶುಗರ್‌ಗಳಿಗೆ ಬ್ರಾಂಡೆಡ್‌ ಔಷಧಿಗೆ ಸುಮಾರು ₹2,000 ರಿಂದ ₹2,500 ಕೊಡಬೇಕಾಗುತ್ತದೆ. ಆದರೆ ಜನೌಷಧಿಗೆ ಕೇವಲ₹400 ರಿಂದ ₹500 ಖರ್ಚಾಗುತ್ತದೆ ಎಂದು ತಿಳಿಸಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಜನೌಷಧಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ವನ್ನು ಸಹಕಾರ ಇಲಾಖೆ ಮಾಡುತ್ತಿದೆ. ಸಹಕಾರಿಗಳು ಕೇಂದ್ರದ ಈ ಜನಪರ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸ
ಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.