ADVERTISEMENT

‘ಯಶಸ್ವಿನಿ’ ಇದ್ದರೆ‌ ‘ಆಯುಷ್ಮಾನ್’ಗೆ ನಿರ್ಬಂಧ: ಆರೋಗ್ಯ ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 14:20 IST
Last Updated 8 ಅಕ್ಟೋಬರ್ 2025, 14:20 IST
<div class="paragraphs"><p>ಆಸ್ಪತ್ರೆ –(ಪ್ರಾತಿನಿಧಿಕ ಚಿತ್ರ)</p></div>

ಆಸ್ಪತ್ರೆ –(ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಯಶಸ್ವಿನಿ ಯೋಜನೆಯ ಫಲಾನುಭವಿಗಳನ್ನು ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ (ಎಬಿ–ಎಆರ್‌ಕೆ) ಯೋಜನೆಯಿಂದ ಹೊರಗಿಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. 

ಸಹಕಾರ ಇಲಾಖೆಯಿಂದ ಯಶಸ್ವಿನಿ ಹಾಗೂ ಆರೋಗ್ಯ ಇಲಾಖೆಯಿಂದ ಎಬಿ–ಎಆರ್‌ಕೆ ಅನುಷ್ಠಾನಗೊಳಿಸಲಾಗಿದೆ. ಅನೇಕ ಕುಟುಂಬಗಳು ಎರಡೂ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಎರಡೂ ಯೋಜನೆಗಳು ಪ್ರತಿ ಕುಟುಂಬಕ್ಕೆ ವಾರ್ಷಿಕ ತಲಾ ₹ 5 ಲಕ್ಷದವರೆಗೆ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತವೆ. ಆದ್ದರಿಂದ ಎರಡೂ ಯೋಜನೆಗಳ ಫಲಾನುಭವಿಗಳಾಗಿರುವವರು ಯಶಸ್ವಿನಿ ಯೋಜನೆಯಡಿಯೇ ಪ್ರಯೋಜನ ಪಡೆಯಬೇಕು ಎಂದು ತಿಳಿಸಲಾಗಿದೆ. 

ADVERTISEMENT

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ಎರಡೂ ಯೋಜನೆಗಳ ಅನುಷ್ಠಾನದ ನಿರ್ವಹಣೆ ಮಾಡುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ ಶಿಫಾರಸು ಮಾಡುವಾಗ, ಯಶಸ್ವಿನಿಯಡಿ ಚಿಕಿತ್ಸೆ ಪಡೆಯುವಂತೆ ಹಿಂಬರಹ ನೀಡಬೇಕು. ಈ ಎರಡೂ ಯೋಜನೆಯ ಫಲಾನುಭವಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಲಾಗಿದೆ.

ರಾಜ್ಯದಲ್ಲಿ 41.51 ಲಕ್ಷ ಮಂದಿ ಯಶಸ್ವಿನಿ ಫಲಾನುಭವಿಗಳಾಗಿದ್ದು, 41.09 ಲಕ್ಷ ಮಂದಿ ಆಧಾರ್ ಹೊಂದಿದ್ದಾರೆ. ಇವರಲ್ಲಿ 35.71 ಲಕ್ಷ ಮಂದಿ ಎರಡೂ ಯೋಜನೆಗಳ ಫಲಾನುಭವಿಗಳಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.