ADVERTISEMENT

ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ! ಪೊಲೀಸ್ ಠಾಣೆ ಮೆಟ್ಟಲೇರಿದ ಪ್ರಕರಣ

ಬೀಗ ಒಡೆದು ಒಳನುಗ್ಗಿದ ಆರೋಪ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 5:11 IST
Last Updated 15 ಜುಲೈ 2025, 5:11 IST
ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿನ ಪಂಚಮಸಾಲಿ ಪೀಠದ ಕಟ್ಟಡಕ್ಕೆ ಗೇಟ್ ಅಳವಡಿಸಿ, ಬೀಗ ಹಾಕಿರುವುದು
ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿನ ಪಂಚಮಸಾಲಿ ಪೀಠದ ಕಟ್ಟಡಕ್ಕೆ ಗೇಟ್ ಅಳವಡಿಸಿ, ಬೀಗ ಹಾಕಿರುವುದು   

ಬಾಗಲಕೋಟೆ: ಕೂಡಲಸಂಗಮ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್‌ಗೆ ಸೇರಿದ ಕಟ್ಟಡವನ್ನು ಕೆಲವರು ಅಕ್ರಮವಾಗಿ ಪ್ರವೇಶಿಸಿ, ಗೇಟ್‌ ಹಾಗೂ ಮಠದ ಕಟ್ಟಿಗೆ ಬಾಗಿಲುಗಳ ಕೀಲಿ ಮುರಿದಿದ್ದಾರೆ ಎಂದು ಹುನಗುಂದ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ ಚಿತ್ತರಗಿ ಎಂಬುವವರು ದೂರು ನೀಡಿದ್ದಾರೆ.

ಭಾನುವಾರ ರಾತ್ರಿ ಮನೆಗೆ ಬಂದಿದ್ದ ಮಲ್ಲನಗೌಡ ಪಾಟೀಲ ಹಾಗೂ ಬಾಬುಗೌಡ ಪಾಟೀಲ ಪೀಠದ ಕೀಲಿ ನೀಡುವಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದರು. 

ಜೇವರ್ಗಿ ತಾಲ್ಲೂಕಿನ ಕುಳಗೇರಿಯ ಮಲ್ಲನಗೌಡ ಪಾಟೀಲ, ಯಡ್ರಾಮಿಯ ಬಾಬುಗೌಡ ಪಾಟೀಲ, ಚಂದ್ರಶೇಖರ ದೇವಲಾಪುರ, ಸುರೇಶ ಹೊಸಪೇಟೆ, ಚೌಗಲಸಾ ಇನ್ನಿತರರು ಸೇರಿ ಪೀಠದ ಒಳಗಡೆ ಹೋಗಿ, ಮುಖ್ಯ ಗೇಟ್‌, ಮಠದ ಕಟ್ಟಿಗೆ ಬಾಗಿಲು ಕೀಲಿ ಮುರಿದು ಅತಿಕ್ರಮವಾಗಿ ಒಳ ಪ್ರವೇಶಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.